ಬಿಹಾರ ಚುನಾವಣೆ: ಸಿದ್ದರಾಮಯ್ಯ ವೋಟ್ ಚೋರಿ ಹೇಳಿಕೆಗೆ ಶೋಭಾ ಕರಂದ್ಲಾಜೆ ಕೌಂಟರ್​

Updated By: ಪ್ರಸನ್ನ ಹೆಗಡೆ

Updated on: Nov 14, 2025 | 6:30 PM

ಬಿಹಾರ ಫಲಿತಾಂಶದ ಕುರಿತು ವೋಟ್ ಚೋರಿ ಆರೋಪ ಮಾಡಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಶೋಭಾ ಕರಂದ್ಲಾಜೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ 135 ಸ್ಥಾನಗಳನ್ನು ಹೇಗೆ ಗೆದ್ದಿತು ಎಂದು ಕರಂದ್ಲಾಜೆ ಪ್ರಶ್ನಿಸಿದ್ದು, ಬಿಜೆಪಿ ಗೆದ್ದರೆ ಮಾತ್ರ ವೋಟ್ ಚೋರಿ ಎನ್ನುವ ಮನೋಭಾವನೆಯನ್ನು ಖಂಡಿಸಿದ್ದಾರೆ.

ಮಂಗಳೂರು, ನವೆಂಬರ್​ 14: ಬಿಹಾರ ಚುನಾವಣಾ ಫಲಿತಾಂಶದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ವೋಟ್ ಚೋರಿ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ 135 ಸ್ಥಾನಗಳನ್ನು ಹೇಗೆ ಗೆದ್ದಿತು ಎಂದು ಕರಂದ್ಲಾಜೆ ಪ್ರಶ್ನಿಸಿದ್ದು, ಬಿಜೆಪಿ ಗೆದ್ದರೆ ಮಾತ್ರ ವೋಟ್ ಚೋರಿ ಎನ್ನುವ ಮನೋಭಾವನೆಯನ್ನು ಖಂಡಿಸಿದ್ದಾರೆ. ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳ ಕುರಿತು ಟೀಕೆ ಮಾಡಿರುವ ಶೋಭಾ, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಹದಗೆಟ್ಟ ರಸ್ತೆಗಳು, ಸಾರಿಗೆ ಬಸ್‌ಗಳ ದುರಸ್ತಿಗೆ ಹಣವಿಲ್ಲದಿರುವುದು, ಬೆಲೆ ಏರಿಕೆ, ಕಬ್ಬು ಬೆಳೆಗಾರರ ಸಮಸ್ಯೆಗಳು ಮತ್ತು ನೆರೆ ಪರಿಹಾರದ ಕೊರತೆಯನ್ನು ಪ್ರಸ್ತಾಪಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಹಣ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.