ಬಿಹಾರದಲ್ಲಿ ಪಟಾಕಿ ಸಿಡಿಸಿ ಜೆಡಿಯು ಕಾರ್ಯಕರ್ತರ ಸಂಭ್ರಮಾಚರಣೆ
ನವೆಂಬರ್ 6ರಂದು ಮೊದಲ ಹಂತದ ಮತದಾನ ಮತ್ತು ನವೆಂಬರ್ 11ರಂದು 2ನೇ ಹಂತದ ಮತದಾನ ನಡೆಯಿತು. ಈ ವರ್ಷ ಬಿಹಾರವು ಅಭೂತಪೂರ್ವವಾಗಿ ಶೇ. 66.91ರಷ್ಟು ಮತದಾನವನ್ನು ಕಂಡಿತು. ಇದು 1951ರಿಂದೀಚೆಗೆ ಬಿಹಾರದ ಇತಿಹಾಸದಲ್ಲಿಯೇ ಅತ್ಯಧಿಕ ಮತದಾನವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ECI) ತಿಳಿಸಿದೆ.
ಪಾಟ್ನಾ, ನವೆಂಬರ್ 14: ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಐತಿಹಾಸಿಕ ಗೆಲುವು ಸಾಧಿಸಿದೆ. ಇದು ಖಚಿತವಾಗುತ್ತಿದ್ದಂತೆ ಜೆಡಿಯು ಕಾರ್ಯಕರ್ತರು ಮತ್ತು ಬೆಂಬಲಿಗರು ಪಾಟ್ನಾದ ಪಕ್ಷದ ಕಚೇರಿಯ ಹೊರಗೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಬಿಹಾರದಲ್ಲಿ ವಿಧಾನಸಭಾ ಚುನಾವಣೆಗಳು (Bihar Assembly Elections) 2 ಹಂತಗಳಲ್ಲಿ ನಡೆದವು. ನವೆಂಬರ್ 6ರಂದು ಮೊದಲ ಹಂತದ ಮತದಾನ ಮತ್ತು ನವೆಂಬರ್ 11ರಂದು 2ನೇ ಹಂತದ ಮತದಾನ ನಡೆಯಿತು. ಈ ವರ್ಷ ಬಿಹಾರವು ಅಭೂತಪೂರ್ವವಾಗಿ ಶೇ. 66.91ರಷ್ಟು ಮತದಾನವನ್ನು ಕಂಡಿತು. ಇದು 1951ರಿಂದೀಚೆಗೆ ಬಿಹಾರದ ಇತಿಹಾಸದಲ್ಲಿಯೇ ಅತ್ಯಧಿಕ ಮತದಾನವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ECI) ತಿಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

