Video: ಮೈಮೇಲೆಲ್ಲಾ ಕಚ್ಚಿದ ಗಾಯ, ಡೇ ಕೇರ್ನಲ್ಲಿರುವ ಮಗುವಿನ ಸ್ಥಿತಿ ಏನಾಗಿದೆ ನೋಡಿ

Updated on: Aug 11, 2025 | 10:29 AM

ಡೇ ಕೇರ್​​ನಲ್ಲಿರುವ ಒಂದು ವರ್ಷದ ಮಗುವಿನ ಮೈಮೇಲೆಲ್ಲಾ ಕಚ್ಚಿದ ಗಾಯ, ಸಿಸಿಟಿವಿ ಫೂಟೇಜ್ ನೋಡಿದಾಗ ಬೆಚ್ಚಿಬೀಳಿಸುವ ಸಂಗತಿ ಬೆಳಕಿಗೆ ಬಂದಿದೆ. ಡೇ ಕೇರ್​​ನಲ್ಲಿ ಮಗುವನ್ನು ನೋಡಿಕೊಳ್ಳುವ ಮಹಿಳೆ ಆ ಮಗುವಿನ ಮೇಲೆ ಪ್ಲಾಸ್ಟಿಕ್ ಬ್ಯಾಟ್​​ನಿಂದ ಹಲ್ಲೆ ನಡೆಸಿದ್ದಷ್ಟೇ ಅಲ್ಲದೆ ಮಗುವನ್ನು ಕಚ್ಚಿ, ನೆಲಕ್ಕೆ ಎಸೆದು ಥಳಿಸಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಆಗಸ್ಟ್ 4 ರಂದು ಈ ಘಟನೆ ನಡೆದಿದ್ದು, ಮಗುವಿನ ತಾಯಿ ಮಗುವನ್ನು ಡೇ ಕೇರ್ ನಿಂದ ಮನೆಗೆ ಕರೆತಂದಾಗ, ಮಗು ಅಳುತ್ತಲೇ ಇತ್ತು

ನೋಯ್ಡಾ, ಆಗಸ್ಟ್​ 11: ಡೇ ಕೇರ್​​ನಲ್ಲಿರುವ ಒಂದು ವರ್ಷದ ಮಗುವಿನ ಮೈಮೇಲೆಲ್ಲಾ ಕಚ್ಚಿದ ಗಾಯ, ಸಿಸಿಟಿವಿ ಫೂಟೇಜ್ ನೋಡಿದಾಗ ಬೆಚ್ಚಿಬೀಳಿಸುವ ಸಂಗತಿ ಬೆಳಕಿಗೆ ಬಂದಿದೆ. ಡೇ ಕೇರ್​​ನಲ್ಲಿ ಮಗುವನ್ನು ನೋಡಿಕೊಳ್ಳುವಾಕೆ  ಆ ಮಗುವಿನ ಮೇಲೆ ಪ್ಲಾಸ್ಟಿಕ್ ಬ್ಯಾಟ್​​ನಿಂದ ಹಲ್ಲೆ ನಡೆಸಿದ್ದಷ್ಟೇ ಅಲ್ಲದೆ ಮಗುವನ್ನು ಕಚ್ಚಿ, ನೆಲಕ್ಕೆ ಎಸೆದು ಥಳಿಸಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಆಗಸ್ಟ್ 4 ರಂದು ಈ ಘಟನೆ ನಡೆದಿದ್ದು, ಮಗುವಿನ ತಾಯಿ ಮಗುವನ್ನು ಡೇ ಕೇರ್ ನಿಂದ ಮನೆಗೆ ಕರೆತಂದಾಗ, ಮಗು ಅಳುತ್ತಲೇ ಇತ್ತು, ಎಷ್ಟು ಸಮಾಧಾನ ಮಾಡಿದರೂ ಅಳು ನಿಲ್ಲಿಸಿರಲಿಲ್ಲ.ಮಗುವಿನ ಬಟ್ಟೆ ಬದಲಾಯಿಸುವಾಗ, ತಾಯಿ ಆಕೆಯ ಎರಡೂ ತೊಡೆಗಳ ಮೇಲೆ ಕಚ್ಚಿದ ಗುರುತುಗಳನ್ನು ಗಮನಿಸಿದ್ದರು. ವೈದ್ಯರ ಬಳಿಗೆ ಕರೆದೊಯ್ದಾಗ ಅದು ಕಚ್ಚಿದ ಗುರುತುಗಳು ಎಂಬುದು ದೃಢಪಟ್ಟಿದೆ. ಬಳಿಕ ಸಿಸಿಟಿವಿ ನೋಡಿದಾಗ  ಘಟನೆಯೂ ಬೆಳಕಿಗೆ ಬಂದಿದೆ. ಡೇ ಕೇರ್ ಸೆಂಟರ್‌ನ ಪರವಾನಗಿಯ ಬಗ್ಗೆಯೂ ತನಿಖೆ ನಡೆಯುತ್ತಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Aug 11, 2025 10:27 AM