Video: ಎರಡು ವರ್ಷದ ಮಗುವನ್ನು ಎತ್ತಿ ನೆಲಕ್ಕೆ ಕುಕ್ಕಿದ ವ್ಯಕ್ತಿ, ಕೋಮಾಗೆ ಜಾರಿದ ಮುಗ್ಧ ಜೀವ
ಎರಡು ವರ್ಷದ ಮಗುವನ್ನು ವ್ಯಕ್ತಿಯೊಬ್ಬ ಎತ್ತಿ ನೆಲಕ್ಕೆ ಎಸೆದಿರುವ ಹೃದಯ ವಿದ್ರಾವಕ ಘಟನೆ ಮಾಸ್ಕೋದಲ್ಲಿ ನಡೆದಿದೆ. ಮಾಸ್ಕೋದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಬಾಲಕನೊಂದಿಗೆ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನ್ನ ತಾಯಿಯೊಂದಿಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪುಟ್ಟ ಮಗುವನ್ನು ಬೆಲರೂಸಿಯನ್ ವ್ಯಕ್ತಿಯೊಬ್ಬರು ಹಿಡಿದು ನೆಲದ ಮೇಲೆ ಎಸೆದಿದ್ದಾನೆ. ಮಗು ಗಂಭೀರವಾಗಿ ಗಾಯಗೊಂಡು, ಕೋಮಾಗೆ ಜಾರಿದೆ.
ಮಾಸ್ಕೋ, ಜೂನ್ 26: ಎರಡು ವರ್ಷದ ಮಗುವನ್ನು ವ್ಯಕ್ತಿಯೊಬ್ಬ ಎತ್ತಿ ನೆಲಕ್ಕೆ ಎಸೆದಿರುವ ಹೃದಯ ವಿದ್ರಾವಕ ಘಟನೆ ಮಾಸ್ಕೋದಲ್ಲಿ ನಡೆದಿದೆ. ಮಾಸ್ಕೋದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಬಾಲಕನೊಂದಿಗೆ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ತನ್ನ ತಾಯಿಯೊಂದಿಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪುಟ್ಟ ಮಗುವನ್ನು ಬೆಲರೂಸಿಯನ್ ವ್ಯಕ್ತಿಯೊಬ್ಬ ಹಿಡಿದು ನೆಲದ ಮೇಲೆ ಎಸೆದಿದ್ದಾನೆ. ಮಗು ಗಂಭೀರವಾಗಿ ಗಾಯಗೊಂಡು, ಕೋಮಾಗೆ ಜಾರಿದೆ. ಬಾಲಕನ ತಲೆಗೆ ಹಾಗೂ ಬೆನ್ನುಹುರಿಗೆ ತೀವ್ರ ಪೆಟ್ಟು ಬಿದ್ದಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಆದರೆ ಈ ವ್ಯಕ್ತಿ ಈ ರೀತಿ ನಡೆದುಕೊಂಡಿದ್ದೇಕೆ ಎನ್ನುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 26, 2025 08:06 AM