‘ಕಬ್ಜ’ ಚಿತ್ರಕ್ಕೆ ಶ್ರೀಯಾ ಶರಣ್ ಕನ್ನಡದಲ್ಲಿ ಡಬ್ ಮಾಡ್ತಾರಾ? ನಟಿ ರಿವೀಲ್ ಮಾಡಿದ್ರು ಅಸಲಿ ವಿಚಾರ
ಟೀಸರ್ಗೆ ಸಿಕ್ಕ ಪಾಸಿಟಿವ್ ಪ್ರತಿಕ್ರಿಯೆಯಿಂದ ಚಿತ್ರತಂಡ ಖುಷಿಯಾಗಿದೆ. ಈಗ ‘ಕಬ್ಜ’ ಚಿತ್ರದ ನಾಯಕಿ ಶ್ರೀಯಾ ಶರಣ್ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ.
‘ಕಬ್ಜ’ ಸಿನಿಮಾದ (Kabza Movie) ಟೀಸರ್ ನೋಡಿದ ಸಿನಿಪ್ರಿಯರು ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವ ಸೂಚನೆ ಟೀಸರ್ ಮೂಲಕ ಸಿಕ್ಕಿದೆ. ಟೀಸರ್ಗೆ ಸಿಕ್ಕ ಪಾಸಿಟಿವ್ ಪ್ರತಿಕ್ರಿಯೆಯಿಂದ ಚಿತ್ರತಂಡ ಖುಷಿಯಾಗಿದೆ. ಈಗ ‘ಕಬ್ಜ’ ಚಿತ್ರದ ನಾಯಕಿ ಶ್ರೀಯಾ ಶರಣ್ (Shriya Saran) ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ಈ ವೇಳೆ ಅವರು ಡಬ್ಬಿಂಗ್ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಇನ್ನೂ ಸಿನಿಮಾಗೆ ಡಬ್ಬಿಂಗ್ ಮಾಡಿಲ್ಲ. ಮಾಡಿದರೆ ಹಿಂದಿ ವರ್ಷನ್ಗೆ ಮಾತ್ರ ನಾನು ಡಬ್ ಮಾಡುತ್ತೇನೆ’ ಎಂದಿದ್ದಾರೆ ಶ್ರೀಯಾ.