ಮಾಳವಿಕಾ ಮನೆಗೆ ಶ್ರುತಿ, ಸುಧಾರಾಣಿ ಸರ್ಪ್ರೈಸ್​ ಎಂಟ್ರಿ; ಹೇಗಿತ್ತು ನೋಡಿ ಜನ್ಮದಿನದ ಸೆಲೆಬ್ರೇಷನ್​

| Updated By: ಮದನ್​ ಕುಮಾರ್​

Updated on: Jan 29, 2022 | 4:01 PM

ಈ ಭೇಟಿಯ ವಿಡಿಯೋವನ್ನು ಸುಧಾರಾಣಿ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಗೆಳತಿ ಮಾಳವಿಕಾಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನಟಿಯರಾದ ಮಾಳವಿಕಾ ಅವಿನಾಶ್​ (Malavika Avinash), ಶ್ರುತಿ ಹಾಗೂ ಸುಧಾರಾಣಿ ಅವರು ಹಲವು ವರ್ಷಗಳ ಅನುಭವ ಹೊಂದಿದ್ದಾರೆ. ಈ ಮೂವರ ನಡುವೆ ಉತ್ತಮ ಬಾಂಧವ್ಯ ಇದೆ. ದಶಕಗಳಿಂದಲೂ ಸ್ನೇಹಿತೆಯರಾಗಿರುವ ಈ ನಟಿಯರು ಆಗಾಗ ಭೇಟಿ ಆಗುತ್ತಾರೆ. ಪರಸ್ಪರ ಕುಶಲೋಪರಿ ವಿಚಾರಿಸುತ್ತ ಕಾಲ ಕಳೆಯುತ್ತಾರೆ. ಜ.28ರಂದು ಮಾಳವಿಕಾ ಅವಿನಾಶ್​ ಜನ್ಮದಿನ. ಗೆಳತಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್​ ನೀಡಲು ಶ್ರುತಿ ಮತ್ತು ಸುಧಾರಾಣಿ (Sudharani) ನಿರ್ಧರಿಸಿದ್ದರು. ಮಾಳವಿಕಾಗೆ ಒಂದು ಮಾತೂ ತಿಳಿಸದೇ, ಸೀಕ್ರೇಟ್​ ಆಗಿ ಅವರ ಮನೆಗೆ ತೆರೆಳಿದ್ದಾರೆ. ಸಡನ್​ ಆಗಿ ಭೇಟಿ ನೀಡಿ ಸರ್ಪ್ರೈಸ್​ ನೀಡಿದ್ದಾರೆ. ಆಕರ್ಷಕವಾದ ಕೇಕ್​ ತೆಗೆದುಕೊಂಡು ಹೋಗಿ ಹುಟ್ಟುಹಬ್ಬ ಸೆಲೆಬ್ರೇಟ್​ ಮಾಡಿದ್ದಾರೆ. ಈ ಭೇಟಿಯ ವಿಡಿಯೋವನ್ನು ಸುಧಾರಾಣಿ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಗೆಳತಿ ಮಾಳವಿಕಾಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಸಿನಿಮಾದ ಜೊತೆಗೆ ರಾಜಕೀಯದಲ್ಲೂ ಮಾಳವಿಕಾ ಅವಿನಾಶ್​ ಮತ್ತು ಶ್ರುತಿ (Actress Shruthi) ಅವರು ಗುರುತಿಸಿಕೊಂಡಿದ್ದಾರೆ. ಎರಡೂ ಕ್ಷೇತ್ರದಲ್ಲಿ ಅವರು ಅಭಿಮಾನಿಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ:

‘ಮತ್ತೆ ಮನ್ವಂತರ’ದ ಮುಖಾಂತರ ಕಿರುತೆರೆಗೆ ಮರಳಲಿದ್ದಾರೆ ಮಾಳವಿಕಾ ಅವಿನಾಶ್

ಕೆಜಿಎಫ್​ ಕಥೆ ಹೇಳಿದ ಮಾಳವಿಕಾ ಅವಿನಾಶ್.. ಪಾರ್ಟ್​ 2 ಸೆಟ್​ ಅದೆಷ್ಟು ಅದ್ಧೂರಿ!

Follow us on