‘ನನಗೆ ಏರು ಧ್ವನಿಯಲ್ಲಿ ಮಾತಾಡ್ತೀರಾ’; ವಿನಯ್ಗೆ ನಡುಕ ಹುಟ್ಟಿಸಿದ ನಟಿ ಶ್ರುತಿ
ಬಿಗ್ ಬಾಸ್ನಲ್ಲಿ ವಿನಯ್ ಅವರು ವಾರದ ದಿನ ಒಂದು ರೀತಿ ಇದ್ದರೆ ವೀಕೆಂಡ್ನಲ್ಲಿ ಒಂದು ತರಹ ಇರುತ್ತಾರೆ. ಈ ಪ್ರಶ್ನೆಯನ್ನು ಶ್ರುತಿ ಮನೆಯವರಿಗೆ ಕೇಳಿದ್ದಾರೆ.
ಈ ವಾರದ ವೀಕೆಂಡ್ ಎಪಿಸೋಡ್ಗೆ ಕಿಚ್ಚ ಸುದೀಪ್ ಅವರು ಗೈರಾಗುತ್ತಿದ್ದಾರೆ. ಇದಕ್ಕೆ ಕಾರಣ ಕೆಸಿಸಿ. ಅವರು ಕ್ರಿಕೆಟ್ ಮೈದಾನದಲ್ಲಿ ಇರುವುದರಿಂದ ಬಿಗ್ ಬಾಸ್ ವೇದಿಕೆ ಏರಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಬಿಗ್ ಬಾಸ್ ಮನೆಯ ಗಾರ್ಡನ್ ಏರಿಯಾದಲ್ಲಿ ನ್ಯಾಯಲಯ ಮಾಡಲಾಗಿದೆ. ಈ ನ್ಯಾಯಾಲಯಕ್ಕೆ ಜಡ್ಜ್ ಆಗಿ ನಟಿ ಶ್ರುತಿ ಬಂದಿದ್ದಾರೆ. ಬಿಗ್ ಬಾಸ್ನಲ್ಲಿ ವಿನಯ್ (Vinay Gowda) ಅವರು ವಾರದ ದಿನ ಒಂದು ರೀತಿ ಇದ್ದರೆ ವೀಕೆಂಡ್ನಲ್ಲಿ ಒಂದು ತರಹ ಇರುತ್ತಾರೆ. ಈ ಪ್ರಶ್ನೆಯನ್ನು ಶ್ರುತಿ ಮನೆಯವರಿಗೆ ಕೇಳಿದ್ದಾರೆ. ನಮ್ರತಾ, ಸಂಗೀತಾ ಸೇರಿ ಅನೇಕರು ಇದನ್ನು ಒಪ್ಪಿದ್ದಾರೆ. ವಿನಯ್ ಸಿಟ್ಟಲ್ಲಿ ಕೂಗಾಡಿದ್ದಾರೆ. ‘ಜಡ್ಜ್ಗೆ ಏರುಧ್ವನಿಯಲ್ಲಿ ಮಾತನಾಡುತ್ತೀರಾ’ ಎಂದು ಶ್ರುತಿ ವಿನಯ್ಗೆ ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

