ಎಂಭತ್ತರ ದಶಕದ ಟಾಪ್ ನಟಿ ಭವ್ಯಾರನ್ನು ವೇದಿಕೆ ಮೇಲೆ ಕಂಡು ಆಶ್ಚರ್ಯ ವ್ಯಕ್ತಪಡಿಸಿದರು ಸಿದ್ದರಾಮಯ್ಯ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 08, 2022 | 11:16 AM

ವಿರೋಧ ಪಕ್ಷದ ನಾಯಕರನ್ನು ವಿಶ್ ಮಾಡಲು ವೇದಿಕೆ ಮೇಲೆ ಬಂದ ಭವ್ಯಾರನ್ನು ಕಂಡು ಸಂತೋಷ ಮತ್ತು ಅಚ್ಚರಿ ವ್ಯಕ್ತಪಡಿಸುವ ಅವರು ಪ್ರೀತಿಯಿಂದ ತಲೆ ನೇವರಿಸಿ ಯೋಗಕ್ಷೇಮ ವಿಚಾರಿಸುತ್ತಾರೆ.

ಮೈಸೂರು: ಎಂಭತ್ತರ ದಶಕದ ಜನಪ್ರಿಯ ನಟಿ ಭವ್ಯಾ (Bhavya) ಅವರನ್ನು ನೀವು ಮರೆತಿರಲಿಕ್ಕೂ ಸಾಕು ಮಾರಾಯ್ರೇ. ಆದರೆ ಮೊನ್ನೆಯಷ್ಟೇ ತಮ್ಮ 75 ನೇ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಈಗ ಮುಂಬೈಯಲ್ಲಿ ನೆಲೆಸಿರುವ 56-ವರ್ಷ-ವಯಸ್ಸಿನ ನಟಿಯನ್ನು ಮರೆತಿಲ್ಲ. ವಿಶ್ವಕರ್ಮ ಸೇವಾ ಟ್ರಸ್ಟ್ ವತಿಯಿಂದ ಮೈಸೂರಲ್ಲಿ (Mysuru) ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷದ ನಾಯಕರನ್ನು ವಿಶ್ ಮಾಡಲು ವೇದಿಕೆ ಮೇಲೆ ಬಂದ ಭವ್ಯಾರನ್ನು ಕಂಡು ಸಂತೋಷ ಮತ್ತು ಅಚ್ಚರಿ ವ್ಯಕ್ತಪಡಿಸುವ ಅವರು ಪ್ರೀತಿಯಿಂದ ತಲೆ ನೇವರಿಸಿ ಯೋಗಕ್ಷೇಮ ವಿಚಾರಿಸುತ್ತಾರೆ.