Karnataka Assembly Polls: ದೆಹಲಿಯಲ್ಲಿ ನಿನ್ನೆ ಸುರ್ಜೆವಾಲ ಕಾರಲ್ಲಿ ಒಟ್ಟಿಗೆ ಪಯಣಿಸಿದ್ದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಂದು ಬೇರೆ ಬೇರೆ ಕಾರುಗಳಲ್ಲಿ!

ಅರುಣ್​ ಕುಮಾರ್​ ಬೆಳ್ಳಿ

Updated on: Apr 05, 2023 | 7:10 PM

ಇಂಥ ಸಣ್ಣ ವಿಷಯಕ್ಕೆಲ್ಲ ಏನೇನೋ ಕಲ್ಪಿಸಿಕೊಳ್ಳುವುದು ತರವಲ್ಲವಾದರೂ ಸಿದ್ದರಾಮಯ್ಯ ಮತ್ತು ಶಿವಕುಮಾರ ನಡುವೆ ಸಾಗುತ್ತಾ ಬಂದಿರುವ ಶೀತಲ ಸಮರ ನಮ್ಮನ್ನು ಆ ಅನಿವಾರ್ಯತೆಗೆ ದೂಡುತ್ತದೆ.

ನವದೆಹಲಿ: ಇದು ಉದ್ದೇಶರಹಿತವೋ, ಉದ್ದೇಶಪೂರ್ವಕವೋ ಅಥವಾ ಕಾಕತಾಳೀಯವೋ ಅಂತ ಗೊತ್ತಾಗುತ್ತಿಲ್ಲ. ನಿನ್ನೆ ಕನ್ನಡಿಗರೆಲ್ಲ ಇದನ್ನು ಗಮನಿಸಿದ್ದಾರೆ, ವಿಷಯವೇನೆಂದರೆ, ದೆಹಲಿಯಲ್ಲಿ ನಿನ್ನೆ ರಂದೀಪ್ ಸುರ್ಜೆವಾಲಾ (Randeep Surjewala) ಕಾರಲ್ಲಿ ಓಡಾಡುವಾಗ ಸಿದ್ದರಾಮಯ್ಯ (Siddaramaiah) ಮುಂದಿನ ಸೀಟಿನಲ್ಲಿ ಆಸೀನರಾಗಿದ್ದರೆ, ಡಿಕೆ ಶಿವಕುಮಾರ್ (DK Shivakumar) ಮತ್ತು ಎಂಬಿ ಪಾಟೀಲ ಹಿಂಭಾಗದಲ್ಲಿ ಕೂತಿದ್ದರು. ಆದರೆ ಇಂದು ಅದೇ ಸುರ್ಜೆವಾಲಾ ಕಾರಲ್ಲಿ ಶಿವಕುಮಾರ್ ಮುಂದೆ ಕೂತಿದ್ದರೆ ಸಿದ್ದರಾಮಯ್ಯ ಬೇರೆ ಕಾರಲ್ಲಿದ್ದರು. ಇಂಥ ಸಣ್ಣ ವಿಷಯಕ್ಕೆಲ್ಲ ಏನೇನೋ ಕಲ್ಪಿಸಿಕೊಳ್ಳುವುದು ತರವಲ್ಲವಾದರೂ ಸಿದ್ದರಾಮಯ್ಯ ಮತ್ತು ಶಿವಕುಮಾರ ನಡುವೆ ಸಾಗುತ್ತಾ ಬಂದಿರುವ ಶೀತಲ ಸಮರ ನಮ್ಮನ್ನು ಆ ಅನಿವಾರ್ಯತೆಗೆ ದೂಡುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.