Sign In

By signing in or creating an account, you agree with Associated Broadcasting Company's Terms & Conditions and Privacy Policy.

Leader of Opposition apologizes: ಬೆಂಗಳೂರಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕ್ಷಮೆಯಾಚಿಸಿದ ಸಿದ್ದರಾಮಯ್ಯ!

Leader of Opposition apologizes: ಬೆಂಗಳೂರಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕ್ಷಮೆಯಾಚಿಸಿದ ಸಿದ್ದರಾಮಯ್ಯ!

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 21, 2023 | 4:13 PM

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯೊಂದರಲ್ಲಿ ಭಾಗಿಯಾಗಿದ್ದ ಕಾರಣ ಸರ್ವಜ್ಞ ನಗರಕ್ಕೆ ಬರುವುದು ತಡವಾಯಿತು, ಅದಕ್ಕಾಗಿ ಕ್ಷಮೆಯಾಚಿಸುವುದಾಗಿ ಸಿದ್ದರಾಮಯ್ಯ ಹೇಳುತ್ತಾರೆ.

ಬೆಂಗಳೂರು: ನಗರದ ಸರ್ವಜ್ಞ ನಗರ (Sarvagnanagar) ಕ್ಷೇತ್ರದಲ್ಲಿ ಇಂದು ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಕ್ಷಮೆ ಕೇಳುವ ಪ್ರಸಂಗ ಎದುರಾಯಿತು ಮಾರಾಯ್ರೇ. ಓದಿ ನಿಮಗೂ ಆಶ್ವರ್ಯವಾಗುತ್ತಿರಬಹುದು. ಸಿದ್ದರಾಮಯ್ಯ ಅಂಡ್ ಸಾರಿ? ನೋವೇಸ್ ಅಂತ ನೀವು ಅಂದಕೊಳ್ಳುತ್ತಿರಬಹುದು. ಆದರೆ ಇಂಥ ಕ್ಷಮೆಗಳನ್ನು ಅವರು ತಮ್ಮ ರಾಜಕೀಯ ಬದುಕಿನಲ್ಲಿ ಹಲವಾರು ಬಾರಿ ಕೇಳಿದ್ದಾರೆ. ವಿಷಯವೇನೆಂದರೆ, ಇಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ಅವರು ತಡವಾಗಿ ಆಗಮಿಸಿದರು. ಕೆಪಿಸಿಸಿ ಕಚೇರಿಯಲ್ಲಿ (KPCC office) ನಡೆದ ಸಭೆಯೊಂದರಲ್ಲಿ ಭಾಗಿಯಾಗಿದ್ದ ಕಾರಣ ಸರ್ವಜ್ಞ ನಗರಕ್ಕೆ ಬರುವುದು ತಡವಾಯಿತು, ಅದಕ್ಕಾಗಿ ಕ್ಷಮೆಯಾಚಿಸುವುದಾಗಿ ಸಿದ್ದರಾಮಯ್ಯ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 21, 2023 04:12 PM