AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ನಿವಾಸದೆದುರು ಕಾಂಗ್ರೆಸ್ ಕಾರ್ಯಕರ್ತರ ಹೈಡ್ರಾಮಾ, ಕೋಲಾರದಿಂದ ಸ್ಪರ್ಧಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಭಿಮಾನಿ ಎಚ್ಚರಿಕೆ

ಚುನಾವಣೆ ಸನ್ನಿಹಿತವಾಗುತ್ತಿದ್ದಂತೆಯೇ ಎಲ್ಲಾ ಪಕ್ಷಗಳಲ್ಲಿಯೂ ಅಸಮಾಧಾನ, ಗೊಂದಲಗಳು ಮೂಡುತ್ತಿದೆ, ಅಂತೆಯೇ ಕಾಂಗ್ರೆಸ್​ನಲ್ಲಿಯೂ ಇಂತಹ ಹಲವು ವಿಚಾರಗಳು ಹರಿದಾಡುತ್ತಿವೆ.

ಸಿದ್ದರಾಮಯ್ಯ ನಿವಾಸದೆದುರು ಕಾಂಗ್ರೆಸ್ ಕಾರ್ಯಕರ್ತರ ಹೈಡ್ರಾಮಾ, ಕೋಲಾರದಿಂದ ಸ್ಪರ್ಧಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಭಿಮಾನಿ ಎಚ್ಚರಿಕೆ
ಸಿದ್ದರಾಮಯ್ಯImage Credit source: Deccan Herald
ನಯನಾ ರಾಜೀವ್
|

Updated on: Mar 21, 2023 | 10:38 AM

Share

ಚುನಾವಣೆ ಸನ್ನಿಹಿತವಾಗುತ್ತಿದ್ದಂತೆಯೇ ಎಲ್ಲಾ ಪಕ್ಷಗಳಲ್ಲಿಯೂ ಅಸಮಾಧಾನ, ಗೊಂದಲಗಳು ಮೂಡುತ್ತಿದೆ, ಅಂತೆಯೇ ಕಾಂಗ್ರೆಸ್​ನಲ್ಲಿಯೂ ಇಂತಹ ಹಲವು ವಿಚಾರಗಳು ಹರಿದಾಡುತ್ತಿವೆ. ಪ್ರಸ್ತುತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ವಿಚಾರಕ್ಕೆ ಬರೋಣ, ಸಿದ್ದರಾಮಯ್ಯ ಕೋಲಾರ(Kolar)ದಿಂದ ಸ್ಪರ್ಧೆ ಮಾಡುವ ಬಗ್ಗೆ ಇದೀಗ ಗೊಂದಲವೆದ್ದಿದೆ. ಸಿದ್ದರಾಮಯ್ಯ ಮನೆ ಮುಂದೆ ರಾಜಕೀಯ(Politics) ಹೈಡ್ರಾಮಾ ನಡೆದಿದ್ದು, ಕೋಲಾರ ಕ್ಷೇತ್ರದಲ್ಲೇ ಸಿದ್ದರಾಮಯ್ಯ ಸ್ಪರ್ಧಿಸಬೇಕು ಎಂದು ಅಭಿಮಾನಿ ಪಟ್ಟು ಹಿಡಿದಿದ್ದಾರೆ, ಕೋಲಾರದಿಂದ ಸ್ಪರ್ಧಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಶರ್ಟ್​ ಬಿಚ್ಚಿ ಬಾರುಕೋಲಿನಿಂದ ಅಭಿಮಾನಿ ಹೊಡೆದುಕೊಂಡು ತಮ್ಮ ಬೆಂಬಲವನ್ನು ಸೂಚಿಸಿದ್ದು ವಿಚಿತ್ರವಾಗಿತ್ತು. ಇನ್ನು ರಾಜಾಜಿನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್​ ಬಗ್ಗೆ ಮತ್ತೆ ಗೊಂದಲವೆದ್ದಿದೆ, ಪುಟ್ಟಣ್ಣಗೆ ರಾಜಾಜಿನಗರ ಕ್ಷೇತ್ರದಿಂದ ಟಿಕೆಟ್ ನೀಡದಂತೆ ಒತ್ತಾಯಿಸಲಾಗುತ್ತಿದೆ.

ಸಿದ್ದರಾಮಯ್ಯ ನಿವಾಸದ ಮುಂದೆ ಕಾರ್ಯಕರ್ತರು ಜಮಾಯಿಸಿದ್ದು, ರಾಜಾಜಿನಗರದಲ್ಲಿ ವಲಸಿಗರಿಗೆ ಮನ್ನಣೆ ನೀಡದಂತೆ ಒತ್ತಾಯಿಸಲಾಗುತ್ತಿದೆ. ಬಿಜೆಪಿ ಭ್ರಷ್ಟಾಚಾರಿಗಳು ಈಕ್ಷೇತ್ರಕ್ಕೆ ಬೇಡವೆಂದು ಘೋಷಣೆ ಕೂಗಲಾಗುತ್ತಿದೆ. ಪುಟ್ಟರಾಜು, ಎಸ್​ ಮನೋಹರ್ ಇಬ್ಬರೂ ರಾಜಾಜಿನಗರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಮತ್ತಷ್ಟು ಓದಿ: ಕೋಲಾರದಲ್ಲಿ ಸಿದ್ದರಾಮಯ್ಯ ಬದಲಿಗೆ ಬೇರೆ ಅಭ್ಯರ್ಥಿ ರೆಡಿ, ಬಾದಾಮಿಯಲ್ಲಿ ಮತ್ತೆ ಚಿಗುರೊಡೆದ ಸಿದ್ದು ಅಭಿಮಾನಿಗಳ ಆಸೆ

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ: ಡಿಕೆ ಶಿವಕುಮಾರ್ ಹೇಳಿದ್ದೇನು? ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ವಿಚಾರ ಕುರಿತು ಕೋಲಾರ ನಿಯೋಗದ ಜತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತುಕತೆ ನಡೆಸಿದ್ದಾರೆ. ಪರಿಷತ್ ಸದಸ್ಯರಾದ ಅನಿಲ್ ಕುಮಾರ್, ನಜೀರ್ ಅಹ್ಮದ್, ಶಾಸಕ ನಂಜೇಗೌಡ ಅವರಿಗೆ ಕರೆ ಮಾಡಿ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ.

ಸಿದ್ದರಾಮಯ್ಯ ಎಲ್ಲಿಂದ ಬೇಕಾದರೂ ಸ್ಪರ್ಧಿಸುವಂತೆ ರಾಹುಲ್ ಗಾಂಧಿ ಹೇಳಿದ್ದಾರೆ. ಎಲ್ಲಿಯಾದರೂ ಸ್ಪರ್ಧಿಸಿ ಗೆದ್ದುಬನ್ನಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ, ಹೀಗಾಗಿ ಕೋಲಾರದಿಂದ ಸ್ಪರ್ಧಿಸುವುದರ ಬಗ್ಗೆ ಸಿದ್ದರಾಮಯ್ಯ ಮಾಹಿತಿ ನೀಡುತ್ತಾರೆ. ನೀವೆಲ್ಲರೂ ಗೊಂದಲಕ್ಕೆ ಒಳಗಾಗುವುದು ಬೇಡ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸಿದ್ದರಾಮಯ್ಯ ಕೋಲಾರದಿಂದಲೇ ಸ್ಪರ್ಧಿಸುತ್ತಾರೆ: ಮಾಜಿ ಉಪ ಸಭಾಪತಿ ಸುದರ್ಶನ್ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂದು ಮಾಜಿ ಉಪ ಸಭಾಪತಿ ಸುದರ್ಶನ್ ಹೇಳಿದ್ದಾರೆ. ಸಿದ್ದರಾಮಯ್ಯ ಕೋಲಾರಕ್ಕೆ ಬರಲೇಬೇಕು, ಕೆಲವರು ಸುಳ್ಳು ಮಾಹಿತಿಗಳನ್ನು ಹಬ್ಬಿಸುತ್ತಿದ್ದಾರೆ. ಸಿದ್ದರಾಮಯ್ಯ ಜತೆ ನಾವು ಮಾತನಾಡಿ ಖಚಿತಪಡಿಸುತ್ತೇವೆ, ಅವರು ಕೋಲಾರದಿಂದ ಸ್ಪರ್ಧಿಸುವವರೆಗೂ ನಾವು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ