ಎಚ್ಡಿ ಕುಮಾರಸ್ವಾಮಿಯಂತೆ ಅಮಾವಾಸ್ಯೆ ದಿನ ಕಾಲಭೈರವನಿಗೆ ಮೊರೆ ಹೋದ ಕೆಪಿಸಿಸಿ ಅಧ್ಯಕ್ಷ: ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್?
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾಲಭೈರವನಿಗೆ ಪೂಜೆ ಸಲ್ಲಿಸಿದ್ದಾರೆ. ಇದೀಗ ಪೂಜೆಯ ಬಗ್ಗೆ ಹಲವು ಕುತೂಹಲ ಮೂಡಿದೆ. ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿರುವುದರಿಂದ ರಾಜಕೀಯ ನಾಯಕರು ಎಲ್ಲಿ ಹೋದರೂ ಅದು ಸುದ್ದಿಯೇ?
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾಲಭೈರವನಿಗೆ ಪೂಜೆ ಸಲ್ಲಿಸಿದ್ದಾರೆ. ಇದೀಗ ಪೂಜೆಯ ಬಗ್ಗೆ ಹಲವು ಕುತೂಹಲ ಮೂಡಿದೆ. ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿರುವುದರಿಂದ ರಾಜಕೀಯ ನಾಯಕರು ಎಲ್ಲಿ ಹೋದರೂ ಅದು ಸುದ್ದಿಯೇ? ಆದರೆ ಡಿಕೆ ಶಿವಕುಮಾರ್ ಕಾಲಭೈರವ ಪೂಜೆ ಮಾಡಿದ್ದರಲ್ಲಿ ಒಂದು ವಿಶೇಷ ಇದೆ. 2018ರಲ್ಲಿ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ನಾಗಮಂಗಲದ ಕಾಲಭೈರವನಿಗೆ ಮೂರು ಅಮಾವಾಸ್ಯೆ ದಿನ ಪೂಜೆ ಮಾಡಿದ್ದರು ಬಳಿಕ 20 ತಿಂಗಳುಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.
ಈ ಬಾರಿ ಡಿಕೆ ಶಿವಕುಮಾರ್ ಕೂಡ ಕಾಲಭೈರವನಿಗೆ ಅಮಾವಾಸ್ಯೆ ಪೂಜೆ ಸಲ್ಲಿಸಿರುವುದರಿಂದ ಡಿಕೆ ಶಿವಕುಮಾರ್ ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಎಂಬುದು ಬಲವಾಗಿ ತೋರುತ್ತಿದೆ.
ಮತ್ತಷ್ಟು ಓದಿ: Congress Bus Yatra: ಡಿಕೆ ಶಿವಕುಮಾರ್ ಆಂಡ್ ಟೀಂ ಮುಳಬಾಗಿಲು, ಕೆಜಿಎಫ್ ಭೇಟಿ
ಕಾಲಭೈರವನ ಪೂಜೆ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, ಇದು ನಮ್ಮ ಮಠ, ಇದು ನಮ್ಮ ಧರ್ಮಪೀಠ, ಹೊಸ ವರ್ಷ, ಅಮಾವಾಸ್ಯೆ ಭೈರವೇಶ್ವರನ ಅಮಾವಾಸ್ಯೆ ಪೂಜೆ ಬಹಳ ಶ್ರೇಷ್ಠವಾದದ್ದು, ಈ ವರ್ಷ ಈ ರಾಜ್ಯದಲ್ಲಿ ಬಹಳಷ್ಟು ವ್ಯತ್ಯಾಸವಾಗಲಿದೆ ಈ ಹಿನ್ನೆಲೆಯಲ್ಲಿ ನಮಗೆ, ನಿಮಗೆ ಹಾಗೂ ನಾಡಿಗೆ ಒಳ್ಳೆಯದಾಗಲಿ ಎಂದು ಪೂಜೆ ಮಾಡಿರುವುದಾಗಿ ತಿಳಿಸಿದ್ದಾರೆ.
ದೇವಸ್ಥಾನ ಎಂಬುದು ಭಕ್ತ ಹಾಗೂ ದೇವರ ನಡುವೆ ವ್ಯವಹಾರ ನಡೆಯುವಂತಹ ಸ್ಥಳ, ನಾನು ಏನು ಬೇಡಿಕೊಳ್ಳುತ್ತೇನೆ, ದೇವರು ಏನು ವರ ಕೊಡುತ್ತಾರೆ ಎಂಬುದು ನಮ್ಮಿಬ್ಬರಿಗೆ ಬಿಟ್ಟಿದ್ದು, ಈ ವಿಚಾರದಲ್ಲಿ ಪೂಜಾರಿಯ ಅಗತ್ಯವಿಲ್ಲ ಎಂದು ನುಡಿದಿದ್ದಾರೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ