Prajadhvani Yatre: ವೇದಿಕೆಯ ಮೇಲಿದ್ದ ಸಿದ್ದರಾಮಯ್ಯನವರಲ್ಲಿಗೆ ತನ್ನ ಪುಟ್ಟ ಮಗುವನ್ನು ಒಯ್ದ ಅಭಿಮಾನಿಯೊಬ್ಬ ಮಗನಿಗೆ ಸಿದ್ದರಾಮಯ್ಯ ಹೆಸರಿಟ್ಟಿದ್ದೇನೆ ಅಂದ!

|

Updated on: Feb 10, 2023 | 3:42 PM

ಅದೇ ಸಮಯಕ್ಕೆ ಯಾರೋ ಒಬ್ಬರು ಭಾಷಣ ಮಾಡುತ್ತಿದ್ದುದ್ದರಿಂದ ಸಿದ್ದರಾಮಯ್ಯ ಅಭಿಮಾನಿಗೆ ಏನು ಹೇಳಿದರು ಅನ್ನೋದು ಗೊತ್ತಾಗುವುದಿಲ್ಲ.

ಯಾದಗಿರಿ: ಸಿದ್ದರಾಮಯ್ಯ (Siddaramaiah) ನೇತೃತ್ವದ ಪ್ರಜಾಧ್ವನಿ ಯಾತ್ರೆ (Prajadhvani Yatre) ಯಾದಗಿರಿ ತಲುಪಿದೆ. ಶುಕ್ರವಾರ ನಗರದಲ್ಲಿ ಕಾಂಗ್ರೆಸ್ ಪಕ್ಷದ ಸಮಾವೇಶ ನಡೆಯುತ್ತಿದ್ದಾಗ ಒಂದು ಪ್ರಸಂಗ ನಡೆಯಿತು ಮಾರಾಯ್ರೇ. ವೇದಿಕೆಯ ಮೇಲೆ ಸಿದ್ದರಾಮಯ್ಯ ಇತರ ನಾಯಕರೊಂದಿಗೆ ಕುಳಿತಿರುವಾಗ ಅವರ ಕಟ್ಟಾ ಅಭಿಮಾನಿಯೊಬ್ಬ (fan) ತನ್ನ ನಾಲ್ಕು ತಿಂಗಳು ಪ್ರಾಯದ ಮಗ ಮತ್ತು ಪತ್ನಿಯೊಂದಿಗೆ ಅವರಲ್ಲಿಗೆ ಹೋಗುತ್ತಾನೆ. ತನ್ನ ಮಗುವನ್ನು ಆಶೀರ್ವದಿಸಬೇಕೆಂದು ಕೋರುವ ಆತ ಮಗನಿಗೆ ಸಿದ್ದರಾಮಯ್ಯ ಅಂತ ಹೆಸರಿಟ್ಟಿರುವುದಾಗಿ ಹೇಳುತ್ತಾನೆ. ಅದೇ ಸಮಯಕ್ಕೆ ಯಾರೋ ಒಬ್ಬರು ಭಾಷಣ ಮಾಡುತ್ತಿದ್ದುದ್ದರಿಂದ ಸಿದ್ದರಾಮಯ್ಯ ಅಭಿಮಾನಿಗೆ ಏನು ಹೇಳಿದರು ಅನ್ನೋದು ಗೊತ್ತಾಗುವುದಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 10, 2023 03:42 PM