Hassan: ಭವಾನಿ ರೇವಣ್ಣ ಮತ್ತು ಪ್ರೀತಂ ಗೌಡ ಪರಸ್ಪರ ಎದುರಾದರೂ ಮಾತಾಡಲ್ಲ, ಮುಗುಳ್ನಗುವುದಿಲ್ಲ!

Hassan: ಭವಾನಿ ರೇವಣ್ಣ ಮತ್ತು ಪ್ರೀತಂ ಗೌಡ ಪರಸ್ಪರ ಎದುರಾದರೂ ಮಾತಾಡಲ್ಲ, ಮುಗುಳ್ನಗುವುದಿಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 10, 2023 | 2:44 PM

ಭವಾನಿ ಹೋಟೆಲ್ ನೊಳಗೆ ನಡೆದು ಹೋಗುವಾಗ ಪ್ರೀತಂ ಅವರನ್ನು ದಾಟಿಕೊಂಡೇ ಹೋಗುತ್ತಾರೆ. ಆದರೆ ಭವಾನಿಯವರಾಗಲೀ, ಪ್ರೀತಂ ಅವರಾಗಲೀ ಪರಸ್ಪರ ವಿಶ್ ಮಾಡುವ ಮಾತು ಹಾಗಿರಲಿ, ಮುಖಗಳನ್ನೂ ನೋಡುವುದಿಲ್ಲ.

ಹಾಸನ: ಸ್ಥಳೀಯ ಶಾಸಕ ಪ್ರೀತಂ ಗೌಡ (Preetham Gowda) ಮತ್ತು ಹೆಚ್ ಡಿ ರೇವಣ್ಣ (HD Revanna) ಕುಟುಂಬದ ನಡುವೆ ಬದ್ಧ ವೈರತ್ವ ಇರುವಂತೆ ಕಾಣುತ್ತದೆ. ಅದಕ್ಕೊಂದು ನಿದರರ್ಶನವನ್ನು ನಾವಿಲ್ಲಿ ತೋರಿಸುತ್ತೇವೆ ನೋಡಿ. ನಗರದ ಹೊಟೆಲೊಂದರಲ್ಲಿ ನಡೆದ ಕಾರ್ಯಕ್ರಮಕ್ಕೆ ಭವಾನಿ ರೇವಣ್ಣ (Bhavani Revanna) ಆಗಮಿಸುವುದನ್ನು ನೋಡಬಹುದು. ಇದೇ ಕಾರ್ಯಕ್ರಮಕ್ಕೆ ಪ್ರೀತಂ ಗೌಡ ಅವರನ್ನೂ ಆಹ್ವಾನಿಸಲಾಗಿತ್ತು. ಭವಾನಿ ಹೋಟೆಲ್ ನೊಳಗೆ ನಡೆದು ಹೋಗುವಾಗ ಪ್ರೀತಂ ಅವರನ್ನು ದಾಟಿಕೊಂಡೇ ಹೋಗುತ್ತಾರೆ. ಆದರೆ ಭವಾನಿಯವರಾಗಲೀ, ಪ್ರೀತಂ ಅವರಾಗಲೀ ಪರಸ್ಪರ ವಿಶ್ ಮಾಡುವ ಮಾತು ಹಾಗಿರಲಿ, ಮುಖಗಳನ್ನೂ ನೋಡುವುದಿಲ್ಲ. ನೀವೇ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 10, 2023 02:40 PM