ಬಲಿ ಕಾ ಬಕ್ರಾ ಮಾಡಲು ಸಿದ್ದರಾಮಯ್ಯರನ್ನು ಕೋಲಾರಕ್ಕೆ ಕರೆತರಲಾಗುತ್ತಿದೆ: ಸಿ ಎಮ್ ಇಬ್ರಾಹಿಂ
ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯಗೆ ಸುರಕ್ಷಿತ ಕ್ಷೇತ್ರ ಹುಡುಕುವ ಸ್ಥಿತಿ ಬರಬಾರದಿತ್ತು. ಅವರನ್ನು ‘ಬಲಿ ಕಾ ಬಕ್ರಾ’ ಮಾಡಲು ಕೋಲಾರಕ್ಕೆ ಕರೆತರಲಾಗುತ್ತಿದೆ ಎಂದು ಇಬ್ರಾಹಿಂ ಹೇಳಿದರು.
ಕೋಲಾರ: ಜೆಡಿ(ಎಸ್) ಪಕ್ಷದ ಪಂಚರತ್ನ ಜೋರಾಗಿಯೇ ಆರಂಭವಾಗಿದೆ ಮಾರಾಯ್ರೇ. ಕೋಲಾರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿ ಎಮ್ ಇಬ್ರಾಹಿಂ (CM Ibrahim) ತಮ್ಮ ಭಾಷಣದಲ್ಲಿ ತೆಲುಗು (Telugu) ವಾಕ್ಯಗಳನ್ನು ಬಳಸುತ್ತ್ತಾ ಮಾಜಿ ಮುಖ್ಯಮಂತ್ರಿ ಮತ್ತು ತಮ್ಮ ಹಳೆಯ ದೋಸ್ತಿ ಸಿದ್ದರಾಮಯ್ಯನವರನ್ನು (Siddaramaiah) ಲೇವಡಿ ಮಾಡಿದರು. ಹಲವಾರು ಬಾರಿ ಶಾಸಕ, ಮಂತ್ರಿ ಮತ್ತು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯಗೆ ಸುರಕ್ಷಿತ ಕ್ಷೇತ್ರ ಹುಡುಕುವ ಸ್ಥಿತಿ ಬರಬಾರದಿತ್ತು. ಅವರನ್ನು ‘ಬಲಿ ಕಾ ಬಕ್ರಾ’ ಮಾಡಲು ಕೋಲಾರಕ್ಕೆ ಕರೆತರಲಾಗುತ್ತಿದೆ ಎಂದು ಇಬ್ರಾಹಿಂ ಹೇಳಿದರು.
ಮತ್ತಷ್ಟು ದೇಶ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ