ಸಿದ್ದರಾಮಯ್ಯ ಸಿಎಂ, ಹೆಂಗ್ ಉಳಿದ್ವೋ ನನ್ ಮೀಸೆ: ಮೀಸೆನೇ ಇಲ್ಲದ ಬಾಲಕನ ಮತ್ತೊಂದು ವಿಡಿಯೋ ವೈರಲ್

|

Updated on: May 20, 2023 | 10:04 PM

ಸಿದ್ದರಾಮಯ್ಯ ಸಿಎಂ ಆಗದಿದ್ದರೆ ಅರ್ಧ ಮೀಸೆ ಬೋಳಿಸ್ತೀನಿ ಎಂದಿದ್ದ ಸಣ್ಣ ಬಾಲಕನೋರ್ವನ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ.

ಕರ್ನಾಟಕದ ಮುಂದಿನ ಸಿಎಂ ಯಾರು ಅನ್ನೋ ಗಂದಲಕ್ಕೆ ತೆರೆಬಿದ್ದಿದೆ. ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ನಡುವೆ ಸಣ್ಣ ಬಾಲಕೋರ್ವನ ವಿಡಿಯೋ ವೈರಲ್ (Viral Video) ಆಗುತ್ತಿದೆ. ವಿಡಿಯೋದಲ್ಲಿ “ಸಿದ್ದರಾಮಯ್ಯ ಸಿಎಂ ಆಗಿದ್ದಾರೆ, ಹೆಂಗ್ ಉಳಿದ್ವೋ ನನ್ ಮೀಸೆ” ಎಂದು ಬಾಲಕ ಹೇಳುವುದನ್ನು ನೋಡಬಹುದು. ಅಷ್ಟಕ್ಕೂ ಈ ಬಾಲಕ ಹೀಗೆ ಅಂದಿದ್ಯಾಕೆ ಅಂತ ಯೋಚಿಸುತ್ತಿದ್ದೀರಾ? ಈ ಹಿಂದೆಯೂ ಈ ಬಾಲಕ ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ, ಸಿದ್ದರಾಮಯ್ಯ ಸಿಎಂ ಆಗದಿದ್ದರೆ ಅರ್ಧ ಮೀಸೆ ಬೋಳಿಸ್ತೀನಿ ಅಂತ ಹೇಳಿದ್ದ.

ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ