Siddaramaiah: ನಾಯಿಮರಿ ಹೇಳಿಕೆ ಸಮರ್ಥಿಸಿಕೊಂಡು ಮುಖ್ಯಮಂತ್ರಿ ಧೈರ್ಯ ಪ್ರದರ್ಶಿಸಿದರೆ ಕೇಂದ್ರದಿಂದ ಅನುದಾನ ಸಿಗುತ್ತವೆ ಎಂದರು
ಪತ್ರಕರ್ತರು ಸಚಿವ ಬಿ ಶ್ರೀರಾಮುಲು ಹೆಸರು ಉಲ್ಲೇಖಿಸಿದಾಗ, ಸಿದ್ದರಾಮಯ್ಯ ‘ಅವನೊಬ್ಬ ಪೆದ್ದ!’ ಎನ್ನುತ್ತಾ ಅಲ್ಲಿಂದ ಹೊರಟರು.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ (Basavaraj Bommai) ಅವರನ್ನು ನಾಯಿಮರಿಗೆ ಹೋಲಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಬೆಂಗಳೂರಲ್ಲಿಂದು ಸುದ್ದಿಗಾರರು ಅವರಿಗೆ ಬಿಜೆಪಿ ನಾಯಕರು ಕ್ಷಮಾಪಣೆ ಕೇಳಬೇಕೆಂದಿದ್ದಾರೆ ಅಂತ ಹೇಳಿದಾಗ, ‘ಬಿಜೆಪಿಯೇ ಒಂದು ಸುಳ್ಳಿನ ಕಾರ್ಖಾನೆ, ಪ್ರಧಾನಿ ನರೇಂದ್ರ ಮೋದಿ (PM Narendra Modi), ಮುಖ್ಯಮಂತ್ರಿ ಬೊಮ್ಮಾಯಿ, ನಳಿನ್ ಕುಮಾರ ಕಟೀಲು ಮೊದಲಾದವರೆಲ್ಲ ಬರೀ ಸುಳ್ಳನ್ನೇ ಹೇಳುತ್ತಾರೆ. ನಾನು ಹೇಳಿದ್ದು ರಾಜ್ಯದ ಹಿತಾಸಕ್ತಿಯ ದೃಷ್ಟಿಯಿಂದ. ಕೇಂದ್ರ ಸರ್ಕಾರದ ಮುಂದೆ ಇವರು ಮಾತಾಡದಿದ್ದರೆ ಅನುದಾನಗಳು ಹೇಗೆ ಸಿಗುತ್ತವೆ? ಧೈರ್ಯ ಪ್ರದರ್ಶಿಸಬೇಕು ಎಂದಿದ್ದೇನೆ.’ ಎಂದು ಸಿದ್ದರಾಮಯ್ಯ ಹೇಳಿದರು. ಪತ್ರಕರ್ತರು ಸಚಿವ ಬಿ ಶ್ರೀರಾಮುಲು ಹೆಸರು ಉಲ್ಲೇಖಿಸಿದಾಗ, ಸಿದ್ದರಾಮಯ್ಯ ‘ಅವನೊಬ್ಬ ಪೆದ್ದ!’ ಎನ್ನುತ್ತಾ ಅಲ್ಲಿಂದ ಹೊರಟರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ