ಪರಿಹಾರ ನೀಡಿದರೆ ನಿಮ್ಮಪ್ಪನ ಗಂಟೇನೂ ಹೋಗುವುದಿಲ್ಲ ಅಂತ ಬಾದಾಮಿಯಲ್ಲಿ ಸಿದ್ದರಾಮಯ್ಯ ತಹಸಿಲ್ದಾರರಿಗೆ ಹೇಳಿದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 10, 2022 | 4:59 PM

ಅವರ ಜೊತೆಯಲ್ಲೇ ಇದ್ದ ತಹೀಸಲ್ದಾರರಿಗೆ ಅವರು, ಪರಿಹಾರ ನೀಡಿದರೆ ನಿಮ್ಮಪ್ಪನ ಮನೆ ಗಂಟೇನೂ ಕರಗುವುದಿಲ್ಲ, ಅದಷ್ಟು ಬೇಗ ಅದನ್ನು ನೀಡುವ ವ್ಯವಸ್ಥೆ ಮಾಡಿ ಅಂತ ಹೇಳಿದರು.

ಬಾಗಲಕೋಟೆ:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಮಾತಾಡುವ ವರಸೆಯೇ ಹಾಗೆ. ಶನಿವಾರ ತಮ್ಮ ಬಾದಾಮಿ (Badami) ಮತಕ್ಷೇತ್ರದ ಗೋವನಕೊಪ್ಪ ಕಿರು ಸೇತುವೆ ಗ್ರಾಮದ ನಿವಾಸಿಗಳಿಗೆ ಮಳೆಯಿಂದಾಗಿರುವ ಸಮಸ್ಯೆಗಳನ್ನು ಕೇಳಿದ ವಿರೋಧ ಪಕ್ಷ ನಾಯಕರು ಎನ್ ಡಿ ಆರ್ ಎಫ್ ಮಾರ್ಗಸೂಚಿ (NDRF norms) ಪ್ರಕಾರ ಜನರಿಗೆ ಪರಿಹಾರ ಸಿಗದಿರುವುದನ್ನು ಕೇಳಿ ವ್ಯಗ್ರರಾದರು. ಅವರ ಜೊತೆಯಲ್ಲೇ ಇದ್ದ ತಹೀಸಲ್ದಾರರಿಗೆ ಅವರು, ಪರಿಹಾರ ನೀಡಿದರೆ ನಿಮ್ಮಪ್ಪನ ಮನೆ ಗಂಟೇನೂ ಕರಗುವುದಿಲ್ಲ, ಅದಷ್ಟು ಬೇಗ ಅದನ್ನು ನೀಡುವ ವ್ಯವಸ್ಥೆ ಮಾಡಿ ಅಂತ ಹೇಳಿದರು.