ಸಿದ್ದರಾಮಯ್ಯ ತಮ್ಮ ಮನೆಯಲ್ಲಿ ಯಾವ ಮಾಂಸವನ್ನಾದರೂ ತಿನ್ನಲಿ, ಅದರೆ ತಿಂದು ದೇವಸ್ಥಾನಕ್ಕೆ ಹೋಗದಿರಲಿ: ಪ್ರತಾಪ್ ಸಿಂಹ, ಸಂಸದ
ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯ ಯಾವ ಮಾಂಸವ್ನಾನದರೂ ತಿನ್ನಲಿ, ಹಂದಿಮಾಂಸ ಬೇಕಾದರೂ ತಿನ್ನಲಿ ಅಂತ ಪದೇಪದೆ ಹೇಳುತ್ತಿದ್ದಾರೆ.
ಮೈಸೂರು: ಸಿದ್ದರಾಮಯ್ಯ (Siddaramaiah) ಮಾಂಸಾಹಾರ ಸೇವಿಸಿ ಕೊಡ್ಲಿಪೇಟೆಯಲ್ಲಿ ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದು ಮತ್ತು ಅದನ್ನು ಸಮರ್ಥಿಸಿಕೊಂಡಿದ್ದು ಅವರ ವಿರುದ್ಧ ಟೀಕಾ ಪ್ರಹಾರ ನಡೆಸುವುದಕ್ಕೆ ಬಿಜೆಪಿ ನಾಯಕರಿಗೆ ಸಾಕಷ್ಟು ಸರಕನ್ನು ಒದಗಿಸಿದೆ. ಸಂಸದ ಪ್ರತಾಪ್ ಸಿಂಹ (Pratap Simha) ಸಿದ್ದರಾಮಯ್ಯ ಯಾವ ಮಾಂಸವ್ನಾನದರೂ ತಿನ್ನಲಿ, ಹಂದಿಮಾಂಸ (pork) ಬೇಕಾದರೂ ತಿನ್ನಲಿ ಅಂತ ಪದೇಪದೆ ಹೇಳುತ್ತಿದ್ದಾರೆ. ಹಾಗೆಯೇ, ಮುಸಲ್ಮಾನರಿಗೂ ಹಂದಿಮಾಂಸ ತಿನ್ನಿಸಲಿ ಅಂತ ಕೆಣಕುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಶಿಷ್ಟ, ಸ್ವಚ್ಛ ಮತ್ಯು ಶಿಸ್ತಿನ ರಾಜಕಾರಣದ ದಿನಗಳು ಮುಗಿದಂತೆ ಕಾಣುತ್ತಿವೆ ಮಾರಾಯ್ರೇ.