ಸಾವರ್ಕರ್ ಬಗ್ಗೆ ಜನಜಾಗೃತಿ ಮೂಡಿಸಲು ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಇಂದಿನಿಂದ ರಥಯಾತ್ರೆ

ರಥದ ಹಾಗೆ ಅಲಂಕೃತಗೊಳ್ಳುತ್ತಿರುವ ಈ ವಾಹನಕ್ಕೆ ಎಲ್ ಇ ಡಿ ಪರದೆ ಕಟ್ಟಲಾಗಿದ್ದು ಅದರಲ್ಲಿ ಸಾವರ್ಕರ್ ಬದುಕು, ಸ್ವಾತಂತ್ರ್ಯ ಹೋರಾಟದಲ್ಲಿ ಅವರು ನಿರ್ವಹಿಸಿದ ಪಾತ್ರ ಮೊದಲಾದ ಸಂಗತಿಗಳು ಬಿತ್ತರಗೊಳ್ಳುತ್ತವೆ.

TV9kannada Web Team

| Edited By: Arun Belly

Aug 23, 2022 | 11:39 AM

ಮೈಸೂರು: ವೀರ್ ಸಾವರ್ಕರ್ (Veer Savarkar) ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮಂಗಳವಾರದಿಂದ ಒಂದು ವಾರದವರೆಗೆ ರಥಯಾತ್ರೆಯೊಂದನ್ನು ಆಯೋಜಿಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು (BS Yediyurappa) ರಥಯಾತ್ರೆಗೆ ಚಾಲನೆ ನೀಡಿದ್ದಾರೆ. ರಥದ ಹಾಗೆ ಅಲಂಕೃತಗೊಳ್ಳುತ್ತಿರುವ ಈ ವಾಹನಕ್ಕೆ ಎಲ್ ಇ ಡಿ ಪರದೆ (LED screen) ಕಟ್ಟಲಾಗಿದ್ದು ಅದರಲ್ಲಿ ಸಾವರ್ಕರ್ ಬದುಕು, ಸ್ವಾತಂತ್ರ್ಯ ಹೋರಾಟದಲ್ಲಿ ಅವರು ನಿರ್ವಹಿಸಿದ ಪಾತ್ರ ಮೊದಲಾದ ಸಂಗತಿಗಳು ಬಿತ್ತರಗೊಳ್ಳುತ್ತವೆ.

Follow us on

Click on your DTH Provider to Add TV9 Kannada