‘ಇಬ್ಬರು ಹೆಂಡತಿಯರೇ ನನ್ನ ಪಾಲಿನ ದೇವರು’: ಪರ್ಸನಲ್ ಲೈಫ್ ಬಗ್ಗೆ ಮಾತಾಡಿದ ಅರ್ಜುನ್ ರಮೇಶ್
Bigg Boss Arjun Ramesh: ‘ಬಿಗ್ ಬಾಸ್ ಕನ್ನಡ ಒಟಿಟಿ’ ಮೂಲಕ ಅರ್ಜುನ್ ರಮೇಶ್ ಅವರ ಜನಪ್ರಿಯತೆ ಹೆಚ್ಚಿದೆ. ತಮ್ಮ ಖಾಸಗಿ ಬದುಕಿನ ಬಗ್ಗೆ ಅವರು ಮಾತನಾಡಿದ್ದಾರೆ.
ನಟ ಅರ್ಜುನ್ ರಮೇಶ್ ಅವರು ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಶೋನಿಂದ ಹೊರಬಂದಿದ್ದಾರೆ. ಗಾಯದ ಸಮಸ್ಯೆಯಿಂದ ಅವರು ಔಟ್ ಆಗಬೇಕಾಯಿತು. ದೊಡ್ಮನೆಯಲ್ಲಿ ಇದ್ದಾಗ ಅವರು ತಮ್ಮ ಖಾಸಗಿ ಜೀವನದ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದರು. ತಮಗೆ ಇಬ್ಬರು ಪತ್ನಿಯರು ಎಂಬುದು ಅವರು ಧೈರ್ಯವಾಗಿ ಮತ್ತು ನೇರವಾಗಿ ಹೇಳಿದ್ದರು. ಆ ಕುರಿತು ಈಗ ಅವರು ಮತ್ತೆ ಮಾತನಾಡಿದ್ದಾರೆ. ‘ಹೊಂದಿಕೊಂಡು ಹೋಗುತ್ತಿರುವುದಕ್ಕೆ ನನ್ನ ಇಬ್ಬರು ಹೆಂಡತಿಯರು ನನ್ನ ಪಾಲಿನ ದೇವತೆಗಳು’ ಎಂದು ಅರ್ಜುನ್ ರಮೇಶ್ (Arjun Ramesh) ಹೇಳಿದ್ದಾರೆ. ‘ಟಿವಿ 9 ಕನ್ನಡ’ಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
Published on: Aug 23, 2022 09:54 AM
Latest Videos