‘ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ತಪ್ಪು ಮಾಡಿದೆ’: ಔಟ್​ ಆದ ಬಳಿಕ ಸ್ಫೂರ್ತಿ ಗೌಡ ಆತ್ಮಾವಲೋಕನ

Spoorthi Gowda | Bigg Boss Kannada OTT: ದೊಡ್ಮನೆಯಿಂದ ಹೊರಬಂದ ಬಳಿಕ ಸ್ಫೂರ್ತಿ ಗೌಡ ಅವರು ಹಲವು ಸಂಗತಿಗಳನ್ನು ತೆರೆದಿಟ್ಟಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಗುಂಪುಗಾರಿಕೆ ಇದೆ ಎಂಬುದನ್ನು ಅವರು ವಿವರಿಸಿದ್ದಾರೆ.

TV9kannada Web Team

| Edited By: Madan Kumar

Aug 23, 2022 | 7:30 AM

‘ಬಿಗ್​ ಬಾಸ್ ಕನ್ನಡ​ ಒಟಿಟಿ’ (Bigg Boss Kannada OTT) ಟ್ರೋಫಿ ಗೆಲ್ಲಬೇಕು ಎಂದು ಎಲ್ಲ ಸ್ಪರ್ಧಿಗಳು ಪ್ರಯತ್ನಿಸುತ್ತಾರೆ. ಆದರೆ ಪ್ರತಿ ವಾರ ಒಬ್ಬರು ಎಲಿಮಿನೇಟ್​ ಆಗಬೇಕು ಎಂಬುದು ಆಟದ ನಿಯಮ. ಎರಡನೇ ವಾರ ನಟಿ ಸ್ಫೂರ್ತಿ ಗೌಡ ಎಲಿಮಿನೇಟ್​ (Bigg Boss Kannada Elimination) ಆಗಿದ್ದಾರೆ. ದೊಡ್ಮನೆಯಿಂದ ಹೊರಬಂದ ಬಳಿಕ ಅವರು ಹಲವು ಸಂಗತಿಗಳನ್ನು ತೆರೆದಿಟ್ಟಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಗುಂಪುಗಾರಿಕೆ ಇದೆ ಎಂಬುದನ್ನು ಸ್ಫೂರ್ತಿ ಗೌಡ (Spoorthi Gowda) ವಿವರಿಸಿದ್ದಾರೆ. ‘ಕ್ಯಾಪ್ಟನ್​ ಹೇಳಿದ್ದನ್ನು ನಾನು ಫಾಲೋ ಮಾಡಿದೆ. ಒಂಟಿಯಾಗಿ ಆಟ ಆಡಿದ್ದರೆ ನಾನು ಗೆಲ್ಲುತ್ತಿದ್ದೆ. ನಮ್ಮ ಗ್ರೂಪ್​​ ಗೆಲ್ಲಬೇಕು ಎಂಬ ಆಶಯ ನನಗಿತ್ತು. ಅದೇ ನಾನು ಮಾಡಿದ ದೊಡ್ಡ ತಪ್ಪು ಅಂತ ನನಗೆ ಈಗ ಅನಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

 

Follow us on

Click on your DTH Provider to Add TV9 Kannada