ಸಿದ್ದರಾಮಯ್ಯ ಕಾರಿನೆಡೆ ಮೊಟ್ಟೆ ಎಸೆದ ಸಂಪತ್ ನೊಂದಿಗೆ ಬಿಜೆಪಿ ನಾಯಕರು ಡೀಲ್ ಮಾಡಿಕೊಂಡಿದ್ದರು: ಯುವ ಕಾಂಗ್ರೆಸ್ ನಾಯಕ
ಸಂಪತ್ ಒಬ್ಬ ಸಣ್ಣ ಗುತ್ತಿಗದಾರನಾಗಿದ್ದು ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದರೆ 50 ಲಕ್ಷ ರೂ. ಮೊತ್ತದ ಗುತ್ತಿಗೆ ಕೊಡಿಸುವ ಆಮಿಷ ಬಿಜಿಪಿ ನಾಯಕರು ಒಡ್ಡಿದ್ದರು ಅಂತ ಮಿಥುನ್ ಹೇಳಿದ್ದಾರೆ.
ಮಡಿಕೇರಿ: ರಾಜ್ಯದಲ್ಲಿ ರಾಜಕೀಯ ಬಹಳ ಕೀಳುಮಟ್ಟಕ್ಕಿಳಿಯುತ್ತಿದೆ ಅಂತ ನಾಡಿನ ಪ್ರತಿಯೊಬ್ಬ ಕನ್ನಡಿಗ ಬೇಸರಿಸುತ್ತಿದ್ದಾನೆ. ಕೊಡಗು ಜಿಲ್ಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ (Siddaramaiah) ಕಾರಿನ ಮೇಲೆ ಮೊಟ್ಟೆ ಎಸೆದ ಸಂಪತ್ (Sampath) ಹೆಸರಿನ ವ್ಯಕ್ತಿ ತಾನೊಬ್ಬ ಕಾಂಗ್ರೆಸ್ ಕಾರ್ಯಕರ್ತ ಅಂತ ಸುಳ್ಳು ಹೇಳಿದ್ದು ಈಗಾಗಲೇ ಎಲ್ಲರರಿಗೂ ಗೊತ್ತಾಗಿದೆ. ಟಿವಿ9 ಕನ್ನಡ ವಾಹಿನಿಯ ಕೊಡಗು ವರದಿಗಾರನೊಂದಿಗೆ ಮಾತಾಡಿರುವ ಜಿಲ್ಲಾ ಯವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಹಾನ್ ಗಲ್ (Mithun Hangal), ಸಂಪತ್ ಒಬ್ಬ ಸಣ್ಣ ಗುತ್ತಿಗದಾರನಾಗಿದ್ದು ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದರೆ 50 ಲಕ್ಷ ರೂ. ಮೊತ್ತದ ಗುತ್ತಿಗೆ ಕೊಡಿಸುವ ಆಮಿಷ ಬಿಜಿಪಿ ನಾಯಕರು ಒಡ್ಡಿದ್ದರು ಅಂತ ಹೇಳಿದ್ದಾರೆ.
Published on: Aug 23, 2022 11:05 AM
Latest Videos