ಸುಪ್ರೀಮ್ ಕೋರ್ಟ್ ನಲ್ಲಿ ಸಮರ್ಪಕವಾಗಿ ವಾದ ಮಂಡಿಸಲು ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದೆ: ಬಿಎಸ್ ಯಡಿಯೂರಪ್ಪ

|

Updated on: Sep 21, 2023 | 4:26 PM

ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಕಾವೇರಿ ನದಿ ನೀರಿನ ವಸ್ತುಸ್ಥಿತಿ ಅರಿಯಲು ಒಂದು ಸಮಿತಿಯನ್ನು ರಚಿಸುವಂತೆ ಮನವಿ ಮಾಡಬೇಕು, ಮತ್ತು ಸಮಿತಿ ನೀಡುವ ವರದಿಯನ್ನು ಆಧಾರವಾಗಿಟ್ಟ್ಟುಕೊಂಡು ನೀರು ಹಂಚಿಕೆ ತೀರ್ಪು ನೀಡಲು ವಿನಂತಿಸಿಕೊಳ್ಳಬೇಕು ಎಂದು ಯಡಿಯೂರಪ್ಪ ಹೇಳಿದರು. ಡಿಎಮ್ ಕೆ ಪಕ್ಷವು ಇಂಡಿಯ ಮೈತ್ರಿಕೂಟದ ಭಾಗವಾಗಿರುವುದರಿಂದ ಅಲ್ಲಿನ ಸರ್ಕಾರದೊಂದಿಗೆ ನೇರವಾಗಿ ಮಾತುಕತೆ ನಡೆಸಿಯೂ ಕರ್ನಾಟಕ ಸರ್ಕಾರ ಸಮಸ್ಯೆಯನ್ನು ಇತ್ಯರ್ಥಗೊಳಿಸಿಕೊಳ್ಳಬಹುದು ಎಂದು ಅವರು ಹೇಳಿದರು.

ಬೆಂಗಳೂರು: ಸುಪ್ರೀಮ್ ಕೋರ್ಟ್ ಆದೇಶ ಹೊರಡಿಸುವ ಮೊದಲೇ ತಮಿಳುನಾಡುಗೆ ನೀರು ಬಿಟ್ಟು ತಪ್ಪು ಮಾಡಿದ ಸಿದ್ದರಾಮಯ್ಯ ಸರ್ಕಾರ (Siddaramaiah government) ನಂತರ ನ್ಯಾಯಾಲಯದ ಮುಂದೆ ಅಂಕಿ-ಅಂಶಗಳೊಂದಿಗೆ ಸೂಕ್ತವಾಗಿ ಮತ್ತು ಸಮರ್ಥವಾಗಿ ವಾದ ಮಂಡಿಸದೆ ಮತ್ತಷ್ಟು ದೊಡ್ಡ ತಪ್ಪು ಮಾಡಿದೆ ಎಂದು ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಹೇಳಿದರು, ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗ ಮಾತಾಡಿದ ಅವರು; ಸುಪ್ರೀಮ್ ಕೋರ್ಟ್, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಅಂತ ಹೇಳಿದ್ದು ರಾಜ್ಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟು ಮಾಡಲಿದೆ ಅಂತ ಹೇಳಿದರು. ಈ ಹಿನ್ನೆಲೆಯಲ್ಲಿ ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಕಾವೇರಿ ನದಿ ನೀರಿನ ವಸ್ತುಸ್ಥಿತಿ ಅರಿಯಲು ಒಂದು ಸಮಿತಿಯನ್ನು ರಚಿಸುವಂತೆ ಮನವಿ ಮಾಡಬೇಕು, ಮತ್ತು ಸಮಿತಿ ನೀಡುವ ವರದಿಯನ್ನು ಆಧಾರವಾಗಿಟ್ಟ್ಟುಕೊಂಡು ನೀರು ಹಂಚಿಕೆ ತೀರ್ಪು ನೀಡಲು ವಿನಂತಿಸಿಕೊಳ್ಳಬೇಕು ಎಂದು ಯಡಿಯೂರಪ್ಪ ಹೇಳಿದರು. ಡಿಎಮ್ ಕೆ ಪಕ್ಷವು ಇಂಡಿಯ ಮೈತ್ರಿಕೂಟದ ಭಾಗವಾಗಿರುವುದರಿಂದ ಅಲ್ಲಿನ ಸರ್ಕಾರದೊಂದಿಗೆ ನೇರವಾಗಿ ಮಾತುಕತೆ ನಡೆಸಿಯೂ ಕರ್ನಾಟಕ ಸರ್ಕಾರ ಸಮಸ್ಯೆಯನ್ನು ಇತ್ಯರ್ಥಗೊಳಿಸಿಕೊಳ್ಳಬಹುದು ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on