ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಸಹಕರಿಸದಂತೆ ಅಧಿಕಾರಿಗಳಿಗೆ ಹೇಳಿ ಸಿದ್ದರಾಮಯ್ಯ ಕ್ಷುಲ್ಲಕ ರಾಜಕಾರಣ: ಶೋಭಾ ಕರಂದ್ಲಾಜೆ

|

Updated on: Nov 30, 2023 | 6:54 PM

ರಾಜ್ಯದ ಸಿದ್ದರಾಮಯ್ಯ ಸರ್ಕಾರ ಅಧಿಕಾರಿಗಳನ್ನು ತನ್ನ ಸ್ವಂತ ಸೊತ್ತು ಅಂತ ಭಾವಿಸಿದೆ, ಅಧಿಕಾರಿಗಳನ್ನು ರಾಜಕಾರಣದ ವ್ಯಾಪ್ತಿಗೆ ತಂದು ಅವರ ಮನಸ್ಸಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿಷಬೀಜವನ್ನು ಬಿತ್ತುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ ಎಂದು ಶೋಭಾ ಕರಂದ್ಲಾಜೆ ಹೇಳಿದರು. ಕೆಟ್ಟ ರಾಜಕಾರಣವನ್ನು ಬಿಟ್ಟು ಕೇಂದ್ರದೊಂದಿಗೆ ಕೈ ಜೋಡಿಸುವ ಕೆಲಸ ಸಿದ್ದರಾಮಯ್ಯ ಮಾಡಬೇಕು ಎಂದು ಅವರು ಹೇಳಿದರು.

ಉಡುಪಿ: ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ (Vikasit Bharat Sankalp Yatra) ಯಾವುದ ರೀತಿಯ ಸಹಕಾರ ನೀಡದಂತೆ ಮತ್ತು ಅದರಲ್ಲಿ ಭಾಗವಹಿಸದಂತೆ ರಾಜ್ಯದ ಸರ್ಕಾರೀ ಅಧಿಕಾರಿಗಳಿಗೆ ಆದೇಶಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರ (Siddaramaiah government) ಸಂಕುಚಿತ ಮನೋಭಾವ ಪ್ರದರ್ಶಿಸಿ ಕ್ಷುಲ್ಲಕ ರಾಜಕಾರಣ (petty politics) ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶೋಭಾ ಅವರು, ವಿಕಸಿತ ಭಾರತ ಸಂಕಲ್ಪ ಯಾತ್ರೆ ಒಂದು ಪಾರ್ಟಿಯ ಕಾರ್ಯಕ್ರಮವಲ್ಲ, ಕೇಂದ್ರ ಸರ್ಕಾರದ ಯೋಜನೆ, ಅಭಿವೃದ್ಧಿ ಮತ್ತು ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲು ಸುಮಾರು 3,000 ವ್ಯಾನ್ ಗಳು ದೇಶದಾದ್ಯಂತ ಸಂಚರಿಸುತ್ತಿವೆ, ಆದರೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಅಸಹಕಾರ ಪ್ರದರ್ಶಿಸುತ್ತಿದೆ ಎಂದು ಶೋಭಾ ಹೇಳಿದರು. ರಾಜ್ಯ ಸರ್ಕಾರ ಧೋರಣೆ ಏನು? ಕೇಂದ್ರದ ಜನಪರ ಯೋಜನೆಗಳ ಆಗತ್ಯ ಸರ್ಕಾರಕ್ಕಿಲ್ಲವೇ? ಉಜಾಲಾ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆಗಳು ರಾಜ್ಯದ ಜನತೆಗೆ ಸಿಗಬಾರದೆಂಬ ಹುನ್ನಾರ ಸಿದ್ದರಾಮಯ್ಯ ಸರ್ಕಾರಕ್ಕಿದೆಯೇ ಎಂದು ಪ್ರಶ್ನಿಸಿದ ಶೋಭಾ, ಕಿಸಾನ್ ಸಮ್ಮಾನ್ ಯೋಜನೆಯ ಹಣ ರೈತರ ಕೈಗೆ ಸಿಗದ ಹಾಗೆ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಆರೋಪಿಸಿದರು,

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on