Sign In

By signing in or creating an account, you agree with Associated Broadcasting Company's Terms & Conditions and Privacy Policy.

‘‘ಅಮ್ಮ ಲೀಲಾವತಿ, ಎಂಜಿಆರ್ ಜೊತೆ ನಟಿಸುವಾಗ ಒಮ್ಮೆ ಹೀಗಾಗಿತ್ತು...’’

‘‘ಅಮ್ಮ ಲೀಲಾವತಿ, ಎಂಜಿಆರ್ ಜೊತೆ ನಟಿಸುವಾಗ ಒಮ್ಮೆ ಹೀಗಾಗಿತ್ತು…’’

ಮಂಜುನಾಥ ಸಿ.
|

Updated on:Nov 30, 2023 | 9:47 PM

Vinod Raj: 70-80 ರ ದಶಕದಲ್ಲಿ ದಕ್ಷಿಣ ಭಾರತದ ಎಲ್ಲ ಸ್ಟಾರ್ ನಟರೊಟ್ಟಿಗೆ ನಟಿಸಿರುವ ಲೀಲಾವತಿ ಅವರು ಒಮ್ಮೆ ತಮಿಳಿನ ಎಂಜಿಆರ್ ಅವರೊಟ್ಟಿಗೆ ನಟಿಸುವಾಗ ಆಗಿದ್ದ ಘಟನೆಯೊಂದನ್ನು ಸ್ವಾರಸ್ಯಕರವಾಗಿ ಹಂಚಿಕೊಂಡಿದ್ದಾರೆ ವಿನೋದ್ ರಾಜ್.

ಹಿರಿಯ ನಟಿ ಲೀಲಾವತಿ (Leelavathi) ಅವರು ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಅವರ ಪುತ್ರ ನಟ ವಿನೋದ್ ರಾಜ್ (Vinod Raj), ತಾಯಿಯ ಯೋಗ ಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ತಾಯಿಯನ್ನು ನೋಡಲು ಚಿತ್ರರಂಗದ ಗಣ್ಯರು ಪ್ರತಿದಿನವೂ ವಿನೋದ್ ರಾಜ್ ಮನೆಗೆ ಭೇಟಿ ನೀಡುತ್ತಲೇ ಇದ್ದಾರೆ. ಇಂಥಹಾ ಸಮಯದಲ್ಲಿ ತುಸು ಬಿಡುವು ಮಾಡಿಕೊಂಡು ಟಿವಿ9 ಜೊತೆ ಮಾತನಾಡಿರುವ ವಿನೋದ್ ರಾಜ್, ತಾಯಿ ಲೀಲಾವತಿಯ ಸಿನಿಮಾ ಪಯಣ, ಖಾಸಗಿ ಜೀವನದ ಬಗ್ಗೆ ಮಾತನಾಡಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದ 70-80 ರ ದಶಕದ ಎಲ್ಲ ಸ್ಟಾರ್ ನಟರೊಟ್ಟಿಗೆ ನಟಿಸಿರುವ ಲೀಲಾವತಿ ಅವರು ಒಮ್ಮೆ ತಮಿಳಿನ ಎಂಜಿಆರ್ ಅವರೊಟ್ಟಿಗೆ ನಟಿಸುವಾಗ ಆಗಿದ್ದ ಘಟನೆಯೊಂದನ್ನು ಸ್ವಾರಸ್ಯಕರವಾಗಿ ಹಂಚಿಕೊಂಡಿದ್ದಾರೆ ವಿನೋದ್ ರಾಜ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 30, 2023 09:47 PM