ಸಿದ್ದರಾಮಯ್ಯ ಸರ್ಕಾರ ಬಂಡೆಯಂತೆ ಅಚಲ, ಯಾವ ಬದಲಾವಣೆಯೂ ಇಲ್ಲ: ಈಶ್ವರ್ ಖಂಡ್ರೆ, ಸಚಿವ
ಶಾಸಕರು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತಾಡಕೂಡದು, ಎಲ್ಲರೂ ಬಾಯ್ಮುಚ್ಚಿಕೊಂಡು ತಮ್ಮ ತಮ್ಮ ಕ್ಷೇತ್ರದ ಕೆಲಸ ಮಾಡಬೇಕು, ಮಾತಾಡಿದರೆ ಪಕ್ಷದ ಹೈಕಮಾಂಡ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಎಂದು ಈಶ್ವರ್ ಖಂಡ್ರೆ ಹೇಳಿದರು. ನೀವು ಸರ್ಕಾರ ಬಂಡೆಯಂತೆ ಅಚಲ ಎನ್ನುತ್ತೀರಿ ಕೆಲ ಸಚಿವರು ಬಂಡೆ ಸರ್ಕಾರವೇ ಬೇಕು ಅಂತಾರಲ್ಲ ಅಂದಾಗ ಖಂಡ್ರೆ ಉತ್ತರಿಸದೆ ಅಲ್ಲಿಂದ ಹೊರಟರು.
ಚಿಕ್ಕಬಳ್ಳಾಪುರ, ಜುಲೈ 3: ನಂದಿ ಗಿರಿಧಾಮದಲ್ಲಿ ಇಂದು ನಮ್ಮ ವರದಿಗಾರನೊಂದಿಗೆ ಮಾತಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸರ್ಕಾರ ಅಸ್ಥಿರಗೊಳ್ಳುವ ಮಾತೇ ಇಲ್ಲ, ಅದು ಬಂಡೆಯಂತೆ ಅಚಲವಾಗಿದೆ, ಸುಭದ್ರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಬ್ಬರೂ ಹೇಳಿದ್ದಾರೆ ಎಂದರು. ಸರ್ಕಾರದಲ್ಲಿ ಮಂತ್ರಿಯಾಗಿರುವವರು ಮತ್ತು ಶಾಸಕರು ಪಕ್ಷದ ಬಲವರ್ಧನೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ, ಎಲ್ಲರ ಗುರಿ 2028 ರ ಚುನಾವಣೆ ಗೆದ್ದು ಪುನಃ ಅಧಿಕಾರಕ್ಕೆ ಬರಬೇಕು ಅನ್ನೋದಾಗಿದೆ ಎಂದು ಸಚಿವ ಹೇಳಿದರು.
ಇದನ್ನೂ ಓದಿ: ನಮ್ಮದು ಭ್ರಷ್ಟಾಚಾರರಹಿತ ಸರ್ಕಾರ, ಲಂಚಗುಳಿತನಕ್ಕೆ ಜೀರೋ ಟಾಲರನ್ಸ್ : ಈಶ್ವರ್ ಖಂಡ್ರೆ, ಅರಣ್ಯ ಸಚಿವ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ