ರಾಜ್ಯ ಸರ್ಕಾರ ಹರಿಪ್ರಸಾದ್ ವಿರುದ್ಧ ಕ್ರಮ ಜರುಗಿಸಿ ಜೈಲಿಗಟ್ಟಬೇಕು: ಅರವಿಂದ್ ಬೆಲ್ಲದ್, ಬಿಜೆಪಿ ಶಾಸಕ
ಕೋಮು ಗಲಭೆಗೆ ಕಾರಣವಾಗಬಹುದಾದ ಮಾತಾಡಿರುವ ಹರಿಪ್ರಸಾದ್ ವಿರುದ್ಧ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಹೇಳುತ್ತಾರೆ. ಆದರೆ ಮತ್ತೊಂದೆಡೆ ಹರಿಪ್ರಸಾದ್ ಪೊಲೀಸರು ತನ್ನಲ್ಲಿಗೆ ಬಂದು ಕೇಳಿದರೆ ವಿವರಗಳನ್ನು ನೀಡುವುದಾಗಿ ಹೇಳುತ್ತಾರೆ. ಯಾರಿಗೂ ಗೊತ್ತಾಗದ ವಿಷಯ ಅವರಿಗೆ ಹೇಗೆ ಗೊತ್ತಾಯಿತು ಅನ್ನೋದೇ ಯಕ್ಷಪ್ರಶ್ನೆ.
ಧಾರವಾಡ: ಕರ್ನಾಟಕದಲ್ಲಿ ಮತೀಯ ಭಾವನೆಗಳನ್ನು ಕೆರಳಿಸಿ ಕೋಮು ಗಲಭೆಗೆ (Communal riot) ಪ್ರಚೋದನೆ ನೀಡುತ್ತಿರುವ ಹಿರಿಯ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ರನ್ನು (BK Hariprasad) ಬಂಧಿಸಿ ಕಾರಾಗೃಹದಲ್ಲಿಡಬೇಕೆಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ (Arvind Bellad) ಹೇಳಿದರು. ಧಾರವಾಡದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, 2002 ರಲ್ಲಿ ಅಯೋಧ್ಯೆಯಿಂದ ರೈಲುಗಾಡಿಯಲ್ಲಿ ವಾಪಸ್ಸಾಗುತ್ತಿದ್ದ 160ಕ್ಕೂ ಹೆಚ್ಚು ಕರಸೇವಕರನ್ನು ಗೋಧ್ರಾದ ಬಳಿ ಮುಸ್ಲಿಂ ಸಮುದಾಯದವರು ಬೋಗಿಗಳಿಗೆಕೊಳ್ಳಿಯಿಟ್ಟು ಸುಟ್ಟು ಹಾಕಿದರು. ಅಂಥ ಘಟನೆ ಮರುಕಳಿಸಲಿದೆ ಅಂತ ಹರಿಪ್ರಸಾದ್ ಹೇಳಿದರೆ ಅರ್ಥವೇನು? ಕಾಂಗ್ರೆಸ್ ಕೇವಲ ಮುಸಲ್ಮಾನರ ವೋಟು ಪಡೆದು ಅಧಿಕಾರಕ್ಕೆ ಬಂದಿದೆಯೇ? ಹಿಂದೂಗಳು ಇವರಿಗೆ ವೋಟು ಹಾಕಿಲ್ಲವೇ? ಅಧಿಕಾರದಲ್ಲಿರುವವರು ರಾಜಧರ್ಮ ನಿಭಾಯಿಸಬೇಕೇ ಹೊರತು ಧರ್ಮಗಳ ವಿಷಯದಲ್ಲಿ ತಾರತಮ್ಯ ಮಾಡಬಾರದು ಎಂದು ಬೆಲ್ಲದ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ