ನವೀನ್ ಮೃತದೇಹ ತರಲು ವಿಮಾನದಲ್ಲಿ ಹೆಚ್ಚು ಜಾಗ ಬೇಕಾಗುತ್ತದೆ; ವಿವಾದಕ್ಕೀಡಾದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್

ನವೀನ್ ಮೃತದೇಹ ತರಲು ವಿಮಾನದಲ್ಲಿ ಹೆಚ್ಚು ಜಾಗ ಬೇಕಾಗುತ್ತದೆ; ವಿವಾದಕ್ಕೀಡಾದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಮೃತ ವಿದ್ಯಾರ್ಥಿ ನವೀನ್​

ಉಕ್ರೇನ್​ನಲ್ಲಿ ಮೃತಪಟ್ಟ ನವೀನ್​ನ ಶವಪೆಟ್ಟಿಗೆಯ ಬದಲು ಸುಮಾರು 8ರಿಂದ 10 ಜನರು ವಿಮಾನದಲ್ಲಿ ಕುಳಿತುಕೊಂಡು ಬರಲು ಸ್ಥಳಾವಕಾಶ ಉಂಟಾಗಲಿದೆ. ಮೃತದೇಹವನ್ನು ತರಲು ವಿಮಾನದಲ್ಲಿ ಹೆಚ್ಚಿನ ಜಾಗ ಬೇಕಾಗುತ್ತದೆ ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ.

TV9kannada Web Team

| Edited By: Sushma Chakre

Mar 04, 2022 | 12:59 PM

ಬೆಂಗಳೂರು: ಉಕ್ರೇನ್‌ನಲ್ಲಿ ಶೆಲ್ ದಾಳಿಯಿಂದ ಹತ್ಯೆಗೊಳಗಾದ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಚಳಗೇರಿ ಗ್ರಾಮದ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡ (Naveen Shekharappa Gyanagowda) ಅವರ ಮೃತದೇಹವನ್ನು ಕರ್ನಾಟಕಕ್ಕೆ ತರಲು ಅವರ ಕುಟುಂಬ ಕಾಯುತ್ತಿದೆ. ಈಗಾಗಲೇ ವೀರಶೈವ ಲಿಂಗಾಯತ ಸಂಪ್ರದಾಯದಂತೆ 4ನೇ ದಿನ ಕಾರ್ಯಗಳನ್ನು ನಡೆಸಲಾಗಿದೆ. ತಮ್ಮ ಮಗನ ಮೃತದೇಹವನ್ನು ತಾಯ್ನಾಡಿಗೆ ತರಲು ವಿದೇಶಾಂಗ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ನವೀನ್ ಅವರ ತಂದೆ ಆರೋಪಿಸಿದ ಬೆನ್ನಲ್ಲೇ ಬಿಜೆಪಿ ಶಾಸಕರೊಬ್ಬರು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ‘ವಿಮಾನದಲ್ಲಿ ಮೃತದೇಹವನ್ನು ತರಲು ಹೆಚ್ಚು ಜಾಗ ಬೇಕಾಗುತ್ತದೆ’ ಎಂದು ಹೇಳಿಕೆ ನೀಡಿ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ (Arvind Bellad) ವಿವಾದ ಸೃಷ್ಟಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಮಾತನಾಡಿ, ಉಕ್ರೇನ್​ನಲ್ಲಿ ಮೃತಪಟ್ಟ ನವೀನ್​ನ ಶವಪೆಟ್ಟಿಗೆಯ ಬದಲು ಸುಮಾರು 8ರಿಂದ 10 ಜನರು ವಿಮಾನದಲ್ಲಿ ಕುಳಿತುಕೊಂಡು ಬರಲು ಸ್ಥಳಾವಕಾಶ ಉಂಟಾಗಲಿದೆ. ಮೃತದೇಹವನ್ನು ತರಲು ವಿಮಾನದಲ್ಲಿ ಹೆಚ್ಚಿನ ಜಾಗ ಬೇಕಾಗುತ್ತದೆ. ಈಗಾಗಲೇ ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರನ್ನು ವಾಪಾಸ್ ಸುರಕ್ಷಿತವಾಗಿ ಕರೆತರಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನವೀನ್ ಅವರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಾದ ಹಾವೇರಿಗೆ ಯಾವಾಗ ತರಲಾಗುವುದು? ಎಂಬ ಪ್ರಶ್ನೆಗಳಿಗೆ ಅರವಿಂದ್ ಬೆಲ್ಲದ್ ಈ ರೀತಿಯ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

“ನವೀನ್ ಅವರ ಪಾರ್ಥಿವ ಶರೀರವನ್ನು ಮರಳಿ ತರಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಉಕ್ರೇನ್ ಯುದ್ಧ ವಲಯವಾಗಿದೆ ಎಂದು ಎಲ್ಲರಿಗೂ ತಿಳಿದಿದೆ. ಅವರ ಶವವನ್ನು ಭಾರತಕ್ಕೆ ತರಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸಾಧ್ಯವಾದರೆ ನವೀನ್ ಮೃತದೇಹವನ್ನು ಮರಳಿ ತರಲಾಗುವುದು ಎಂದು ಶಾಸಕ ಅರವಿಂದ್ ಬೆಲ್ಲದ್ ತಿಳಿಸಿದ್ದಾರೆ.

ಉಕ್ರೇನ್​ನಲ್ಲಿ ಬಿಗಿ ವಾತಾವರಣ ನಿರ್ಮಾಣವಾಗಿದ್ದು, ಜೀವಂತವಾಗಿರುವವರನ್ನು ಮರಳಿ ಕರೆತರುವುದು ತುಂಬಾ ಸವಾಲಿನದ್ದಾಗಿದೆ. ಇದರ ನಡುವೆ ಮೃತ ದೇಹವನ್ನು ತರಲು ವಿಮಾನದಲ್ಲಿ ಹೆಚ್ಚು ಜಾಗ ಬೇಕಾಗುತ್ತದೆ ಎಂಬ ಕಾರಣದಿಂದ ಸತ್ತವರನ್ನು ಮರಳಿ ತರುವುದು ಹೆಚ್ಚು ಕಷ್ಟಕರವಾಗಿದೆ. ಆ ಶವ ಪೆಟ್ಟಿಗೆಯ ಬದಲು ಎಂಟರಿಂದ 10 ಜನರಿಗೆ ಸ್ಥಳಾವಕಾಶ ಸಿಗಲಿದೆ. ಮೃತ ದೇಹವು ಹೆಚ್ಚು ಜಾಗವನ್ನು ತೆಗೆದುಕೊಳ್ಳುತ್ತದೆ ಎಂದು ಬಿಜೆಪಿ ನಾಯಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ.

ನವೀನ್ ಅವರ ಮೃತದೇಹವನ್ನು ಮರಳಿ ತರಲು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ನವೀನ್ ದಿನಸಿ ವಸ್ತುಗಳನ್ನು ತೆರಲು ಹೋಗಿದ್ದಾಗ ರಷ್ಯಾದ ಶೆಲ್ ದಾಳಿಗೆ ಬಲಿಯಾಗಿದ್ದರು.

ಇದನ್ನೂ ಓದಿ: ಉಕ್ರೇನ್​​ನಲ್ಲಿ ಮೆಡಿಕಲ್ ವಿದ್ಯಾರ್ಥಿ ನವೀನ್ ಸಾವಿನ ಹಿನ್ನೆಲೆ ನೀಟ್ ವಿರುದ್ಧ ಸಮರ ಸಾರಿದ ಜೆಡಿಎಸ್: ಹೆಚ್​ಡಿ ಕುಮಾರಸ್ವಾಮಿ ಟ್ವೀಟ್

ನವೀನ್ ಕುಟುಂಬಕ್ಕೆ ಪರಿಹಾರ ನೀಡುತ್ತೇವೆ, ಅದರೆ ದೇಹವನ್ನು ಇಲ್ಲಿಗೆ ತರುವುದು ನಮ್ಮ ಮೊದಲ ಆದ್ಯತೆಯಾಗಿದೆ: ಬೊಮ್ಮಾಯಿ

Follow us on

Related Stories

Most Read Stories

Click on your DTH Provider to Add TV9 Kannada