Karnataka Assembly Election: ಸಿದ್ದರಾಮಯ್ಯ ಜೊತೆ ಪ್ರಚಾರ ಕಾರ್ಯದಲ್ಲಿ ಕಾಣಿಸಿಕೊಂಡ ಮೊಮ್ಮಗ, ಮೂರನೇ ತಲೆಮಾರಿಗೆ ಈಗ್ಲಿಂದೇ ತಾಲೀಮು?

|

Updated on: Apr 18, 2023 | 2:56 PM

ಅಕಾಲಿಕ ಮರಣಕ್ಕೆ ತುತ್ತಾದ ಸಿದ್ದರಾಮಯ್ಯರ ಮೊದಲ ಮಗ ರಾಕೇಶ್ ಸಿದ್ದರಾಮಯ್ಯ ಮಗ ಇಂದು ತಾತನ ಜೊತೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ಕಾಣಿಸಿಕೊಂಡಿದ್ದಾನೆ

ಮೈಸೂರು: ರಾಜಕೀಯ ಬದುಕಿನ ಮುಸ್ಸಂಜೆಯಲ್ಲಿರುವಾಗಲೇ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರು (Siddaramaiah) ಎರಡನೇ ಮಗ ಯತೀಂದ್ರ ಸಿದ್ದರಾಮಯ್ಯರನ್ನು (Yathindra Siddaramaiah) ತಮ್ಮ ಉತ್ತರಾಧಿಕಾರಿಯಾಗಿ ತಯಾರು ಮಾಡಿದ್ದಾರೆ. ಮಗನ ಬಳಿಕ ಅಥವಾ ಜೊತೆಗೆ ಮೊಮ್ಮಗನನ್ನೂ ರಾಜಕೀಯಕ್ಕೆ ತರುವ ಉದ್ದೇಶ ಸಿದ್ದರಾಮಯ್ಯನವರಿಗಿದೆಯೇ? ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಅಕಾಲಿಕ ಮರಣಕ್ಕೆ ತುತ್ತಾದ ಸಿದ್ದರಾಮಯ್ಯರ ಮೊದಲ ಮಗ ರಾಕೇಶ್ ಸಿದ್ದರಾಮಯ್ಯ (Rakesh Siddaramaiah ) ಮಗ ಇಂದು ತಾತನ ಜೊತೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ಕಾಣಿಸಿಕೊಂಡಿದ್ದಾನೆ. ಏನು ಸರ್ ವಿಷಯ ಅಂತ ಮಾಧ್ಯಮದವರು ಕೇಳಿದಾಗ, ಮೊಮ್ಮಗನಿಗೀಗ ಕೇವ 17 ವರ್ಷ, ಪಿಯುಸಿ ಓದುತ್ತಿದ್ದಾನೆ, ಚುನಾವಣಾ ಪ್ರಚಾರ ಹೇಗಿರುತ್ತದೆ ಅಂತ ನೋಡುವ ಆಸೆ ಇತ್ತಂತೆ, ಅದಕ್ಕೇ ಬಂದಿದ್ದಾನೆ. ಕುಟುಂಬದ ಯಾವ ಸದಸ್ಯನನ್ನೂ ತಾನು ರಾಜಕಾರಣಕ್ಕೆ ಬರುವಂತೆ ಒತ್ತಾಯಿಸಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ