Karnataka Assembly Polls; ಸಿಈಸಿ ಸಭೆಯಲ್ಲಿ ಅಖಂಡ ಶ್ರೀನಿವಾಸಮೂರ್ತಿ ಹೆಸರು ಶಿಫಾರಸ್ಸು ಮಾಡಲಾಗಿತ್ತು, ಹೈಕಮಾಂಡ್ ಯಾಕೆ ಕೈಬಿಟ್ಟಿತೋ ಗೊತ್ತಿಲ್ಲ: ಜಿ ಪರಮೇಶ್ವರ

Karnataka Assembly Polls; ಸಿಈಸಿ ಸಭೆಯಲ್ಲಿ ಅಖಂಡ ಶ್ರೀನಿವಾಸಮೂರ್ತಿ ಹೆಸರು ಶಿಫಾರಸ್ಸು ಮಾಡಲಾಗಿತ್ತು, ಹೈಕಮಾಂಡ್ ಯಾಕೆ ಕೈಬಿಟ್ಟಿತೋ ಗೊತ್ತಿಲ್ಲ: ಜಿ ಪರಮೇಶ್ವರ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 18, 2023 | 12:10 PM

ಟಿಕೆಟ್ ಹಂಚಿಕೆ ಸಮಯದಲ್ಲಿ ಒಂದು ವರ್ಗದ ವಿರೋಧ ಮತ್ತೊಂದು ವರ್ಗದ ವಿರೋಧ ಬೆಂಬಳ ಇದ್ದೇ ಇರುತ್ತದೆ ಎಂದು ಪರಮೇಶ್ವರ ಹೇಳಿದರು.

ಬೆಂಗಳೂರು: ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ (Akhanda Srinivasa Murthy) ಟಿಕೆಟ್ ಯಾಕೆ ಸಿಕ್ಕಿಲ್ಲ ಅನ್ನೋದನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜಿ ಪರಮೇಶ್ವರ (G Parameshwara) ಸ್ಪಷ್ಟವಾಗಿ ಹೇಳಲಿಲ್ಲ. ದೆಹಲಿಯಲ್ಲಿ ನಡೆದ ಸಿಈಸಿ ಸಭೆಯಲ್ಲಿ (CEC meeting) ಅಖಂಡರ ಹೆಸರು ಚರ್ಚಿಸಲಾಗಿತ್ತು ಆದರೆ, ತಾವು ದೆಹಲಿಯಿಂದ ವಾಪಸ್ಸಾದ ಬಳಿಕ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಪರಮೇಶ್ವರ್ ಅಪಾದನೆಯನ್ನು ಹೈಕಮಾಂಡ್ ಕಡೆ ದೂಡಿದರು. ಪುಲಿಕೇಶಿ ನಗರದಲ್ಲಿ ಪರಮೇಶ್ವರ ಬೆಂಬಲಿಗನಿಗೆ ಟಿಕೆಟ್ ನೀಡಲು ಮತ್ತು ಅಲ್ಪಸಂಖ್ಯಾತರ ವಿರೋಧದ ಕಾರಣವಿರುವ ಕಾರಣ ಅಖಂಡಗೆ ಟಿಕೆಟ್ ನಿರಾಕರಿಸಲಾಗಿದೆಯೇ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪರಮೇಶ್ವರ, ಹಾಗೇನೂ ಇಲ್ಲ, ಟಿಕೆಟ್ ಹಂಚಿಕೆ ಸಮಯದಲ್ಲಿ ಒಂದು ವರ್ಗದ ವಿರೋಧ ಮತ್ತೊಂದು ವರ್ಗದ ವಿರೋಧ ಬೆಂಬಳ ಇದ್ದೇ ಇರುತ್ತದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ