AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

A different Ganesh temple: ಇಷ್ಟಾರ್ಥ ನೆರವೇರಿದ ಬಳಿಕ ಕಲಬುರಗಿಯ ಉದ್ಭವ ಗಣಪನಿಗೆ ಭಕ್ತರು ಪೇಂಟನ್ನು ಕಾಣಿಕೆಯಾಗಿ ನೀಡುತ್ತಾರೆ!

A different Ganesh temple: ಇಷ್ಟಾರ್ಥ ನೆರವೇರಿದ ಬಳಿಕ ಕಲಬುರಗಿಯ ಉದ್ಭವ ಗಣಪನಿಗೆ ಭಕ್ತರು ಪೇಂಟನ್ನು ಕಾಣಿಕೆಯಾಗಿ ನೀಡುತ್ತಾರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 19, 2023 | 8:05 AM

Share

ಕಳೆದ 35 ವರ್ಷಗಳಿಂದ ಗಣೇಶನ ವಿಗ್ರಹವನ್ನು ಪೇಂಟ್ ಮಾಡುತ್ತಿರುವ ನಂದ ಕಿಶೋರ್ ಹೇಳುವಂತೆ ಬೇರೆ ರಾಜ್ಯದ ಜನ ಸಹ ತಾವು ಖುದ್ದಾಗಿ ಬರಲು ಸಾಧ್ಯವಾಗದಿದ್ದರೂ ಪೇಂಟನ್ನು ಕಾಣಿಕೆಯಾಗಿ ಕಳಿಸುತ್ತಾರೆ.

ಕಲಬುರಗಿ: ನೀವು ಕಲಬುರಗಿಯವರಾಗಿದ್ದರೆ ಈ ಗಣಪತಿ ದೇವಸ್ಥಾನದ (Ganesh temple) ಬಗ್ಗೆ ಗೊತ್ತಿರುತ್ತದೆ. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ಗುಡಿಯೆನಿಸುವುದು ನಿಜವಾದರೂ ಭಕ್ತಾದಿಗಳು ಗಣಪನಿಗೆ ನೀಡುವ ಕಾಣಿಕೆಯಿಂದ (offering) ಬಹಳ ವಿಶಿಷ್ಟ ದೇವಸ್ಥಾನವೆನಿಸಿದೆ. ತಮ್ಮ ಇಷ್ಟಾರ್ಥ ನೆರವೇರಿದಾಗ ಜನ ವಿಘ್ನೇಶ್ವರನಿಗೆ ತೆಂಗಿನ ಕಾಯಿ, ಹೂವು ಹಣ್ಣು ಅಥವಾ ಸಿಹಿತಿಂಡಿಗಳನ್ನು ನೈವೇದ್ಯವಾಗಿ ಸಲ್ಲಿಸುವ ಬದಲು ಪೇಂಟ್ ಗಳನ್ನು (paints) ನೀಡುತ್ತಾರೆ! ಕಳೆದ 35 ವರ್ಷಗಳಿಂದ ಗಣಪತಿ ವಿಗ್ರಹಕ್ಕೆ ಬಣ್ಣ ಬಳಿಯುತ್ತಿರುವ ಒಬ್ಪ ಪೇಂಟರ್ ಭಕ್ತರು ಕೊಟ್ಟ ಪೇಂಟನ್ನು ವಿಗ್ರಹಕ್ಕೆ ಪದೇಪದೇ ಬಳಿಯುತ್ತಿರುತ್ತಾರೆ.

ಗಣೇಶ ಮತ್ತು ದೇವಸ್ಥಾನದ ಬಗ್ಗೆ ಸ್ಥಳೀಯರೊಬ್ಬರು ಹೇಳುವ ಮಾತು ಕೇಳಿಸಿಕೊಳ್ಳಿ.

ಇದನ್ನೂ ಓದಿ: ಬೆಂಗಳೂರು ಹೋಟೆಲ್​, ರೆಸ್ಟೋರೆಂಟ್​ಗಳಲ್ಲೂ ಮತದಾನ ಜಾಗೃತಿ: ತಿಂಡಿ-ತಿನಿಸುಗಳೊಂದಿಗೆ ಟೇಬಲ್​ಗೆ ಬರುತ್ತೆ ಮತದಾನ ಸಂದೇಶ

ಭಕ್ತರೊಬ್ಬರ ಬೇಡಿಕೆ ಈಡೇರಿದ ಕಾರಣ ಅವರು ಗಣಪನ ವಿಗ್ರಹಕ್ಕೆ ಪೇಂಟ್ ಮಾಡಿಸುತ್ತಿದ್ದಾರೆ.

‘ನಾನು ದೇವರ ಮುಂದಿಟ್ಟಿದ್ದ ಬೇಡಿಕೆ ಈಡೇರಿದೆ. ಹಾಗಾಗೇ, ಗಣೇಶನ ವಿಗ್ರಹವನ್ನು ಪೇಂಟ್ ಮಾಡಿಸುತ್ತಿದ್ದೇನೆ,’ ಎಂದು ಭಕ್ತ ಹೇಳುತ್ತಾರೆ.

ಕಳೆದ 35 ವರ್ಷಗಳಿಂದ ಗಣೇಶನ ವಿಗ್ರಹವನ್ನು ಪೇಂಟ್ ಮಾಡುತ್ತಿರುವ ನಂದ ಕಿಶೋರ್ ಹೇಳುವಂತೆ ಬೇರೆ ರಾಜ್ಯದ ಜನ ಸಹ ತಾವು ಖುದ್ದಾಗಿ ಬರಲು ಸಾಧ್ಯವಾಗದಿದ್ದರೂ ಪೇಂಟನ್ನು ಕಾಣಿಕೆಯಾಗಿ ಕಳಿಸುತ್ತಾರೆ.

ಇದನ್ನೂ ಓದಿ: ನಮಗೆ 150 ಸೀಟು ಕೊಡಿ, ಭರವಸೆಗಳನ್ನು ಈಡೇರಿಸುತ್ತೇವೆ: ಕರ್ನಾಟಕದ ಮತದಾರರಲ್ಲಿ ರಾಹುಲ್ ಗಾಂಧಿ ಮನವಿ

‘ಇದು ಉದ್ಭವ ಗಣೇಶನ ವಿಗ್ರಹ. ಇದನ್ನು ಯಾರೂ ಪ್ರತಿಷ್ಠಾಪಿಸಿಲ್ಲ ಅಥವಾ ಕೆತ್ತಿಲ್ಲ, ಭೂಗರ್ಭದಿಂದ ಉದ್ಭವವಾಗಿರುವ ಗಣಪತಿಯ ಮೂರ್ತಿ. ಈ ಸಂಗತಿ ಪವಾಡವಲ್ಲದೆ ಮತ್ತೇನೂ ಅಲ್ಲ. ವಿಗ್ರಹವನ್ನು ಕಳೆದ 35 ವರ್ಷಗಳಿಂದ ಪೇಂಟ್ ಮಾಡುತ್ತಿದ್ದೇನೆ. ನಾನೊಬ್ಬ ವೃತ್ತಿಪರ ಪೇಂಟರ್. ಮೊದಲು ವಿಗ್ರಹದ ಪೇಟಿಂಗ್ ರೂ.500 ತಗಲುತಿತ್ತು, ಈಗ ರೂ. 8,000 ಆಗುತ್ತದೆ,’ ಎಂದು ಪೇಂಟರ್ ನಂದಕಿಶೋರ್ ಹೇಳುತ್ತಾರೆ.

ಶತಮಾನಗಳಿಂದ ಈ ವಿಶಿಷ್ಟ ಆಚರಣೆ ಜಾರಿಯಲ್ಲಿದೆಯಂತೆ. ನಂದ ಕಿಶೋರ್ ಒಂದು ವರ್ಷದಲ್ಲಿ ಕನಿಷ್ಟ 200 ಬಾರಿ ಗಣೇಶನ ವಿಗ್ರಹವನ್ನು ಪೇಂಟ್ ಮಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ