Karnataka Assembly Polls; ಮೂಲ ಕಾಂಗ್ರೆಸ್ಸಿಗರಲ್ಲದೆ ಮೊದಲು ನನ್ನೊಂದಿಗೆ ಬಿಜೆಪಿಯಲ್ಲಿದ್ದ ಕಾರ್ಯಕರ್ತರು ಸಹ ಗೆಲುವಿಗೆ ಪ್ರಯತ್ನಿಸಲಿದ್ದಾರೆ: ಲಕ್ಷ್ಮಣ ಸವದಿ
ರೈತರ ಮತ್ತು ಕಾರ್ಮಿಕರ ಬೆಂಬಲವೂ ತಮಗಿರುವುದರಿಂದ ಗೆಲುವು ಸಾಧಿಸುವ ಬಗ್ಗೆ ಸಂಶಯವಿಲ್ಲ ಎಂದು ಸವದಿ ಹೇಳಿದರು.
ಬೆಳಗಾವಿ: ಆಥಣಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಲಕ್ಷ್ಮಣ ಸವದಿ (Laxman Savadi) ಇಂದು ನಾಮಪತ್ರ ಸಲ್ಲಿಸುವ ಮೊದಲು ಅಥಣಿಯಲ್ಲಿ (Athani) ಭರ್ಜರಿ ರೋಡ್ ಶೋ (Road Show) ನಡೆಸಿದರು. ಅಥಣಿಯ ಡಾ ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೆಂಬಲಿಗರು ನೆರೆದು ಸವದಿಗೆ ಜೈಕಾರ ಕೂಗಿದರು. ಇದೇ ಸಂದರ್ಭದಲ್ಲಿ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಸವದಿ, ಭಾರಿ ಅಂತರದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯಲ್ಲಿ ತಮ್ಮೊಂದಿಗಿದ್ದ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದಾರೆ, ಮೂಲ ಕಾಂಗ್ರೆಸ್ಸಿಗರ ಜೊತೆ ಅವರು ಸಹ ತನ್ನ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಅವರು ಹೇಳಿದರು. ರೈತರ ಮತ್ತು ಕಾರ್ಮಿಕರ ಬೆಂಬಲವೂ ತಮಗಿರುವುದರಿಂದ ಗೆಲುವು ಸಾಧಿಸುವ ಬಗ್ಗೆ ಸಂಶಯವಿಲ್ಲ ಎಂದು ಸವದಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos