Karnataka Assembly Polls: ದತ್ತಾ ಮೇಲೆ ದೇವೇಗೌಡರಿಗೆ ಭಾರೀ ಪ್ರೀತಿ ಮತ್ತು ಅಭಿಮಾನ ಎನ್ನುವ ರೇವಣ್ಣ ಪತ್ನಿ ಭವಾವಿ ಹೆಸರು ಜಪಿಸುವುದನ್ನು ಮಾತ್ರ ನಿಲ್ಲಿಸಲ್ಲ!
ಕಳೆದ 3 ವರ್ಷಗಳಿಂದ ಭವಾನಿ ಹಾಸನದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅದರಲ್ಲೂ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಅವರು ಮಾಡಿದ ಕೆಲಸ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ರೇವಣ್ಣ ಹೇಳಿದರು.
ಚಿಕ್ಕಮಗಳೂರು: ಜೆಡಿಎಸ್ ಪಿತಾಮಹ ಹೆಚ್ ಡಿ ದೇವೇಗೌಡ (HD Devegowda) ಅವರಿಗೆ ವೈಎಸ್ ವಿ ದತ್ತಾ (YSV Datta) ಮೇಲೆ ವಿಶೇಷ ಅಭಿಮಾನ ಮತ್ತು ಪ್ರೀತಿ ಇದೆ, ಸುಮಾರು 50 ವರ್ಷಗಳಿಂದ ದತ್ತಾರನ್ನು ಮಗನಂತೆ ನೋಡಿಕೊಂಡಿದ್ದಾರೆ, ಹಾಗಾಗೇ ಇಂದು ದತ್ತಾ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರೊಂದಿಗಿರಲು 92-ವರ್ಷ-ವಯಸ್ಸಿನ ದೇವೇಗೌಡರು ಹೆಲಿಕಾಪ್ಟರ್ ನಲ್ಲಿ ಕಡೂರಿಗೆ ಬಂದರು ಎಂದು ಹೆಚ್ ಡಿ ರೇವಣ್ಣ (HD Revanna) ಹೇಳಿದರು. ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ತಮ್ಮ ಪತ್ನಿ ಭವಾನಿಗೆ ನೀಡಬೇಕು ಹಟ ಹಿಡಿದು ಜೆಡಿಎಸ್ ನಾಯತ್ವವನನ್ನು ಇಕ್ಕಟ್ಟಿಗೆ ಸಿಕ್ಕಿಸಿದ್ದ ರೇವಣ್ಣ ಈಗ ವರಸೆ ಬದಲಿಸಿರುವರಾದರೂ ಪತ್ನಿಯ ಪರ ಜಪಿಸುವುದನ್ನು ಮಾತ್ರ ನಿಲ್ಲಿಸಿಲ್ಲ. ಕಳೆದ 3 ವರ್ಷಗಳಿಂದ ಭವಾನಿ ಹಾಸನದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅದರಲ್ಲೂ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಅವರು ಮಾಡಿದ ಕೆಲಸ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ರೇವಣ್ಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ