ಕಡೂರು ಕ್ಷೇತ್ರದ ಜೆಡಿಎಸ್ ಟಿಕೆಟ್ ವೈಎಸ್​ವಿ ದತ್ತಾಗೆ ಫೈನಲ್, ಹಾಲಿ ಅಭ್ಯರ್ಥಿ ಧನಂಜಯ್​ಗೆ ನಿರಾಸೆ

ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿ ಚುನಾವಣೆಗೆ ಟಿಕೆಟ್​​ ಸಿಗದೆ ನಿರಾಶರಾಗಿದ್ದ ವೈಎಸ್​ವಿ ದತ್ತಾ ಮತ್ತೆ ಜೆಡಿಎಸ್​​ ಸೇರ್ಪಡೆಯಾಗಿದ್ದು, ಇವರಿಗೆ ಕಡೂರು ಕ್ಷೇತ್ರದ ಟಿಕೆಟ್ ಫೈನಲ್ ಆಗಿದೆ. ಇತ್ತ ಹಾಲಿ ಜೆಡಿಎಸ್ ಅಭ್ಯರ್ಥಿ ಧನಂಜಯ್​ ಟಿಕೆಟ್ ಕೈತಪ್ಪುವ ಭೀತಿಯಲ್ಲಿದ್ದಾರೆ.

ಕಡೂರು ಕ್ಷೇತ್ರದ ಜೆಡಿಎಸ್ ಟಿಕೆಟ್ ವೈಎಸ್​ವಿ ದತ್ತಾಗೆ ಫೈನಲ್, ಹಾಲಿ ಅಭ್ಯರ್ಥಿ ಧನಂಜಯ್​ಗೆ ನಿರಾಸೆ
ಸಿಎಂ ಧನಂಜಯ ಮತ್ತು ವೈಎಸ್​ವಿ ದತ್ತಾ
Follow us
|

Updated on:Apr 13, 2023 | 9:22 PM

ಚಿಕ್ಕಮಗಳೂರು: ಮರಳಿ ಜೆಡಿಎಸ್ ಸೇರ್ಪಗೊಂಡ ಹೆಚ್​ಡಿ ದೇವೇಗೌಡ (HD Deve Gowda) ಅವರ ಕಟ್ಟಾ ಅನುಯಾಯಿ ವೈಎಸ್​ವಿ ದತ್ತಾ (YSV Datta) ಅವರಿಗೆ ಕಡೂರು ಕ್ಷೇತ್ರದ ಟಿಕೆಟ್ ಫೈನಲ್ ಆಗಿದೆ. ಇತ್ತ​ ಟಿಕೆಟ್ ಕೈ ತಪ್ಪುವ ಭೀತಿಯಲ್ಲಿರುವ ಹಾಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ಸಿ.ಎಂ. ಧನಂಜಯ್ (CM Dhananjay), ಮೂರು ದಿನಗಳ ಒಳಗಾಗಿ ಗೊಂದಲ ನಿವಾರಣೆಯಾಗಲಿದೆ ಎಂದು ಹೇಳಿದ್ದಾರೆ. ದತ್ತಾ ಜೆಡಿಎಸ್ ಸೇರ್ಪಡೆ ನಂತರ ಸುದ್ದಿಗೋಷ್ಠಿ ನಡೆಸಿದ ಧನಂಜಯ್, ಒತ್ತಡಕ್ಕೆ ಒಳಗಾಗಿ ದತ್ತಾಗೆ ಟಿಕೆಟ್ ಘೋಷಿಸಿದ್ದಾರೆ, 2-3 ದಿನದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತೆ. ನಾಯಕರು ಚರ್ಚಿಸಿ ಒಳ್ಳೆ ನಿರ್ಧಾರಕ್ಕೆ ಬರುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಹೆಚ್​ಡಿ ಕುಮಾರಸ್ವಾಮಿ, ಪ್ರಜ್ಬಲ್ ರೇವಣ್ಣ, ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದೆ. ಪಕ್ಷ ಸಂಘಟನೆಗೆ ಹಾಸನಕ್ಕೆ ಕಳಿಸಿದ್ದರು. ಕಡೂರಿಗೆ ಬಂದ ಒಂದೇ ವಾರಕ್ಕೆ ಹಾಸನಕ್ಕೆ ವಾಪಸ್ ಕರೆದರು. ಹಾಸನ ಜೆಡಿಎಸ್ ಹಲವು ಪದಾಧಿಕಾರಿಗಳು, ಕಾರ್ಯಕರ್ತರ ಮಧ್ಯೆ ನನ್ನ ಹೆಸರು ಘೋಷಿಸಿದ್ದರು. ದತ್ತ ಪಕ್ಷ ತೊರೆದ ಮೇಲೆ ನಾನಿಲ್ಲದೆ ಜೆಡಿಎಸ್ ಇಲ್ಲ ಎಂಬಂತೆ ಹಿಡಿತದಲ್ಲಿ ಇಟ್ಟುಕೊಂಡಿದ್ದರು. ನಾನು ಅದು ಸುಳ್ಳು ಎಂದು ನಿರೂಪಿಸಿದೆ. ನಾನು ಕುಮಾರಸ್ವಾಮಿ ಅಲ್ಲ, ನಾನೇ ಧನಂಜಯ್ ಎಂದು ಕುಮಾರಸ್ವಾಮಿ ಮತ ಕೇಳಿದ್ದರು ಎಂದರು.

ಇದನ್ನೂ ಓದಿ: Karnataka Assembly Polls: ಪ್ರಾಮಾಣಿಕ ಮತ್ತು ಸರಳ ರಾಜಕಾರಣಿ ವೈಎಸ್ ವಿ ದತ್ತಾಗೂ ಚುನಾವಣೆಯಲ್ಲಿ ಸ್ಪರ್ಧಿಸುವುದೇ ಮುಖ್ಯವಾಯಿತೇ?

ದತ್ತ ಅವರಿಗೆ ಕಾಂಗ್ರೆಸ್​ ಟಿಕೆಟ್ ಸಿಗದಿದ್ದಾಗ ಸ್ವತಂತ್ರವಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದರು. ಸ್ವತಂತ್ರವಾಗಿ ಸ್ಪರ್ಧಿಸಿದರೆ ಸೋಲುತ್ತೇನೆಂದು ಭಾವಿಸಿ ದೇವೇಗೌಡರು, ರೇವಣ್ಣ ಮೇಲೆ ಒತ್ತಡ ತಂದು ಪಕ್ಷಕ್ಕೆ ಮರುಸೇರ್ಪಡೆ ಆಗಿದ್ದಾರೆ. ಇಂದು ಮಧ್ಯಾಹ್ನ ಪ್ರಜ್ವಲ್ ನನ್ನನ್ನು ಕಚೇರಿಗೆ ಬಂದು ಬನ್ನಿ ದತ್ತಾ ಜೊತೆ ಮಾತನಾಡೋಣ ಎಂದರು. ನಾನು ಬರುತ್ತೇನೆ ನೀವು ಹೋಗಿ ಎಂದು ಹೇಳಿದ್ದೆ, ಅವರ ಜೊತೆ ಹೋಗಲು ಆಗಿಲ್ಲ. ಈ ನಡುವೆ ಪ್ರಜ್ವಲ್ ದತ್ತಾ ಹೆಸರನ್ನ ಘೋಷಿಸಿದ್ದಾರೆ ಎಂದು ತಿಳಿಯಿತು. ಒತ್ತಡಕ್ಕೆ ಒಳಗಾಗಿ ಘೋಷಿಸಿದ್ದಾರೆ, 2-3 ದಿನದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತೆ. ನಾಯಕರು ಚರ್ಚಿಸಿ ಒಳ್ಳೆ ನಿರ್ಧಾರಕ್ಕೆ ಬರುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿ ಚುನಾವಣೆಗೆ ಟಿಕೆಟ್​​ ಸಿಗದೆ ನಿರಾಶರಾಗಿದ್ದ ವೈಎಸ್​ವಿ ದತ್ತಾ (YSV Datta) ಮತ್ತೆ ಜೆಡಿಎಸ್​​ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ, ಕಡೂರು ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿಯನ್ನಾಗಿಯೂ ಅವರನ್ನು ಘೋಷಣೆ ಮಾಡಲಾಗಿದೆ. ಈ ಕುರಿತು ಪಕ್ಷದ ನಾಯಕ ಹೆಚ್​ಡಿ ರೇವಣ್ಣ ಗುರುವಾರ ಸಂಜೆ ಘೋಷಣೆ ಮಾಡಿದರು. ಕಡೂರು ಕ್ಷೇತ್ರದ ಜೆಡಿಎಸ್​​ ಅಭ್ಯರ್ಥಿಯಾಗಿ ದತ್ತಾ ಅವರು ಏಪ್ರಿಲ್ 18ರಂದು ನಾಮಪತ್ರ ಸಲ್ಲಿಸಲಿದ್ದಾರೆ.

ವಿಧಾನಸಭೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:19 pm, Thu, 13 April 23

ಸೊಂಟಪಟ್ಟಿಯಿಂದ ಬಿಗ್ ಬಾಸ್ ಸ್ಪರ್ಧಿಗಳಿಗೆ ಶುರುವಾಯ್ತು ಹೊಸ ತಲೆಬಿಸಿ
ಸೊಂಟಪಟ್ಟಿಯಿಂದ ಬಿಗ್ ಬಾಸ್ ಸ್ಪರ್ಧಿಗಳಿಗೆ ಶುರುವಾಯ್ತು ಹೊಸ ತಲೆಬಿಸಿ
ಮುಸ್ಲಿಂ ವೋಟುಗಳು ಮಾರಾಟಕ್ಕಿಲ್ಲ ಎಂದಷ್ಟೇ ನಾನು ಹೇಳಿದ್ದು: ಜಮೀರ್ ಅಹ್ಮದ್
ಮುಸ್ಲಿಂ ವೋಟುಗಳು ಮಾರಾಟಕ್ಕಿಲ್ಲ ಎಂದಷ್ಟೇ ನಾನು ಹೇಳಿದ್ದು: ಜಮೀರ್ ಅಹ್ಮದ್
ಪಾಟ್ನಾದಲ್ಲಿ ತನಿಷ್ಕ್ ಶೋರೂಮ್‌ನಲ್ಲಿ 5 ಲಕ್ಷ ಮೌಲ್ಯದ ಆಭರಣ ದರೋಡೆ
ಪಾಟ್ನಾದಲ್ಲಿ ತನಿಷ್ಕ್ ಶೋರೂಮ್‌ನಲ್ಲಿ 5 ಲಕ್ಷ ಮೌಲ್ಯದ ಆಭರಣ ದರೋಡೆ
ಭಾಷಣಕ್ಕೆ ಮೊದಲು ಹಿರಿಯರ ಪಾದಮುಟ್ಟಿ ಆಶೀರ್ವಾದ ಪಡೆದ ರೇವತಿ ನಿಖಿಲ್
ಭಾಷಣಕ್ಕೆ ಮೊದಲು ಹಿರಿಯರ ಪಾದಮುಟ್ಟಿ ಆಶೀರ್ವಾದ ಪಡೆದ ರೇವತಿ ನಿಖಿಲ್
ಚುನಾವಣಾ ಆಯೋಗದ ಅಧಿಕಾರಿಗಳ ಜೊತೆ ಉದ್ಧವ್ ಠಾಕ್ರೆ ವಾಗ್ವಾದ
ಚುನಾವಣಾ ಆಯೋಗದ ಅಧಿಕಾರಿಗಳ ಜೊತೆ ಉದ್ಧವ್ ಠಾಕ್ರೆ ವಾಗ್ವಾದ
ಮಾಜಿ ಪ್ರಧಾನಿಯ ಘನತೆಗೆ ತಕ್ಕುದಲ್ಲದ ಮಾತು ದೇವೇಗೌಡ ಆಡುತ್ತಾರೆ: ಸಿಎಂ
ಮಾಜಿ ಪ್ರಧಾನಿಯ ಘನತೆಗೆ ತಕ್ಕುದಲ್ಲದ ಮಾತು ದೇವೇಗೌಡ ಆಡುತ್ತಾರೆ: ಸಿಎಂ
ಬಿಜೆಪಿ ಶಾಸಕ ಯತ್ನಾಳ್​ಗೆ ಸಾರ್ವಜನಿಕರಿಂದ ತೀವ್ರ ತರಾಟೆ
ಬಿಜೆಪಿ ಶಾಸಕ ಯತ್ನಾಳ್​ಗೆ ಸಾರ್ವಜನಿಕರಿಂದ ತೀವ್ರ ತರಾಟೆ
ಬಟ್ಲರ್​ ಬ್ಯಾಟ್​ ಪವರ್​ಗೆ ಸ್ಟೇಡಿಯಂನಿಂದ ಹೊರಬಿದ್ದ ಚೆಂಡು..!
ಬಟ್ಲರ್​ ಬ್ಯಾಟ್​ ಪವರ್​ಗೆ ಸ್ಟೇಡಿಯಂನಿಂದ ಹೊರಬಿದ್ದ ಚೆಂಡು..!
ವಕ್ಫ್ ವಿರುದ್ಧ ಮೊನ್ನೆಯಷ್ಟೇ ವಿಜಯಪುರದಲ್ಲಿ ಹೋರಾಟ ನಡೆಸಿದ್ದ ಯತ್ನಾಳ್
ವಕ್ಫ್ ವಿರುದ್ಧ ಮೊನ್ನೆಯಷ್ಟೇ ವಿಜಯಪುರದಲ್ಲಿ ಹೋರಾಟ ನಡೆಸಿದ್ದ ಯತ್ನಾಳ್
ಕೋಟ್ಯಂತರ ರೂಪಾಯಿ ಚಿನ್ನದ ಒಡೆಯ ಸುರೇಶ್; ಆದ್ರೆ ಒಂದು ತುತ್ತು ಊಟಕ್ಕೆ ಜಗಳ
ಕೋಟ್ಯಂತರ ರೂಪಾಯಿ ಚಿನ್ನದ ಒಡೆಯ ಸುರೇಶ್; ಆದ್ರೆ ಒಂದು ತುತ್ತು ಊಟಕ್ಕೆ ಜಗಳ