Arista Valet: ಈ ಡಿಜಿಟಲ್ ವ್ಯಾಲೆಟ್ ಕಳೆದರೆ ಚಿಂತಿಸುವ ಅಗತ್ಯವಿಲ್ಲ, ಅದು ಕೂಡಲೇ ನಿಮ್ಮ ಮೊಬೈಲ್ಗೆ ಅಲರ್ಟ್ ರವಾನಿಸುತ್ತದೆ!
ಸ್ಮಾರ್ಟ್ ವ್ಯಾಲೆಟ್ ಒಂದು ಸಾಧಾರಣ ಪರ್ಸ್ ನಂತೆಯೇ ಕಾಣುತ್ತದೆ. ಅದರೆ ಅದರ ಒಳಭಾಗದಲ್ಲಿ ಒಂದು ಚಿಪ್ ಅಳವಡಿಸಲಾಗಿರುತ್ತದೆ ಮತ್ತು ಅದು ಒಂದು ಆ್ಯಪ್ ಮೂಲಕ ಮೊಬೈಲ್ ಫೋನ್ ಗೆ ಕನೆಕ್ಟ್ ಅಗಿರುತ್ತದೆ.
ನವದೆಹಲಿ: ವ್ಯಾಲೆಟ್ (Wallet) ಅಥವಾ ಪರ್ಸನ್ನು ಕಳೆದುಕೊಳ್ಳುವುದೆಂದರೆ ಅದು ದುಸ್ವಪ್ನಕ್ಕಿಂತ (nightmare) ಕಮ್ಮಿಯೇನೂ ಅಲ್ಲ. ಭಯಂಕರ ಫಜೀತಿ ಅನುಭವಿಸಿ ಬಿಡುತ್ತೇವೆ. ಆದರೆ, ಇನ್ನು ಮುಂದೆ ಪರ್ಸ್ ಕಳೆದುಹೋದಾಗ ಚಿಂತಿಸುವ ಅಗತ್ಯವಿಲ್ಲ. ಯಾಕೆಂದರೆ ದೆಹಲಿಯಲ್ಲಿರುವ ಸ್ಟಾರ್ಟ್ ಅಪ್ ಕಂಪನಿಯೊಂದು (start up company) ಕಳೆದು ಹೋದ ಪರ್ಸ್ ಹುಡುಕಲು ಒಂದು ಪರಿಹಾರ ಕಂಡುಹಿಡಿದಿದೆ.
‘ನಾವು ತಯಾರಿಸುವ ವ್ಯಾಲಟ್ ಮೊಬೈಲ್ ಫೋನ್ ಗೆ ಕರೆಮಾಡುತ್ತದೆ. ಯಾವುದೇ ಬಗೆ, ಯಾವುದೇ ಕಂಪನಿಯ ಮೊಬೈಲ್ ಪೋನ್ ಜೊತೆ ಹೊಂದಿಕೊಳ್ಳುತ್ತದೆ. ಪರ್ಸ್ ಕಳೆದು ಹೋದಾಗ ಕಳೆದುಕೊಂಡವರ ಮೊಬೈಲ್ ಗೆ ಅದು ಕಾಲ್ ಮಾಡುತ್ತದೆ. ಹಾಗಾಗಿ ನೀವು ಸುಲಭವಾಗಿ ವ್ಯಾಲಟ್ ಅನ್ನು ಹುಡುಕಬಹುದು. ಅದೇ ರೀತಿ ನಿಮ್ಮ ಫೋನ್ ಕಳೆದಾಗಲೂ ವ್ಯಾಲಟ್ ಸಹಾಯದಿಂದ ಅದನ್ನು ಪತ್ತೆಹಚ್ಚಬಹುದು, ವ್ಯಾಲೆಟ್ ನಲ್ಲಿ ಒಂದು ಬಜರ್ ಅಳವಡಿಸಲಾಗಿರುವುದರಿಂದ ಪತ್ತೆ ಹಚ್ಚವುದು ಕಷ್ಟವಾಗಲಾರದು,’ ಎಂದು ಅರಿಸ್ತಾ ವರ್ಲ್ಡ್ ಸ್ಟಾರ್ಟ್ ಅಪ್ ಕಂಪನಿಯ ಸಂಸ್ಥಾಪಕಿ ಮತ್ತು ಸಿಈಓ ಪೂರ್ವಿ ರಾಯ್ ಹೇಳುತ್ತಾರೆ.
ಇದನ್ನೂ ಓದಿ: Mental Health: ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಅಸ್ವಸ್ಥತೆಗಳು ನಿಮ್ಮ ಪ್ರಾಣಕ್ಕೆ ಕಂಟಕವಾಗಬಹುದು ಎಚ್ಚರ
ಸ್ಮಾರ್ಟ್ ವ್ಯಾಲೆಟ್ ಒಂದು ಸಾಧಾರಣ ಪರ್ಸ್ ನಂತೆಯೇ ಕಾಣುತ್ತದೆ. ಅದರೆ ಅದರ ಒಳಭಾಗದಲ್ಲಿ ಒಂದು ಚಿಪ್ ಅಳವಡಿಸಲಾಗಿರುತ್ತದೆ ಮತ್ತು ಅದು ಒಂದು ಆ್ಯಪ್ ಮೂಲಕ ಮೊಬೈಲ್ ಫೋನ್ ಗೆ ಕನೆಕ್ಟ್ ಅಗಿರುತ್ತದೆ.
‘ವ್ಯಾಲೆಟ್ ಮತ್ತು ಮೊಬೈಲ್ ನಡುವಿನ ಅಂತರ 10 ಮೀಟರ್ ಗಿಂತ ಹೆಚ್ಚಾದರೆ ಫೋನ್ ಮತ್ತು ವ್ಯಾಲೆಟ್ ಎರಡೂ ಮಾಲೀಕನಿಗೆ ಒಂದು ಅಲರ್ಟ್ ಕಳಿಸುತ್ತವೆ.
‘ವ್ಯಾಲೆಟ್ ಮತ್ತು ಮೊಬೈಲ್ ಒಂದು ಸ್ಮಾರ್ಟ್ ಟೆಕ್ನಾಲಜಿಗೆ ಕನೆಕ್ಟ್ ಆಗಿರುತ್ತವೆ, ಇದು ಪ್ರತ್ಯೇಕಿಸುವ ಅಲಾರಂ ಹೊಂದಿದೆ. ಹಾಗಾಗಿ ಕಳುವು, ಕಳ್ಳನೊಬ್ಬ ಪೋನ್ ಕಸಿದುಕೊಂಡು ಓಡುವಾಗ ಅಥವಾ ಪಿಕ್ ಪಾಕೆಟ್ ನಡೆದ ಸಂದರ್ಭದಲ್ಲಿ ಅಲಾರಂ ಹೊಡೆದುಕೊಳ್ಳಲಾರಂಭಿಸುತ್ತದೆ ಮತ್ತು ಇದರಿಂದ ಜನ ಕೂಡಲೇ ಜಾಗೃತರಾಗುತ್ತಾರೆ,’ ಎಂದು ಪೂರ್ವಿ ರಾಯ್ ಹೇಳುತ್ತಾರೆ.
ಇದನ್ನೂ ಓದಿ: ಶೆಟ್ಟರ್ ಪಕ್ಷ ಬಿಟ್ಟಿದ್ದರಿಂದ ಏನೂ ಪರಿಣಾಮವಾಗದು; ಬಿಎಲ್ ಸಂತೋಷ್ರನ್ನು ಸಮರ್ಥಿಸಿದ ಯಡಿಯೂರಪ್ಪ
‘ಗ್ರಾಹಕರಿಂದ ನಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಅವರಲ್ಲಿ ಶೇಕಡ 30 ರಷ್ಟು ಜನ ರಿಪೀಟರ್ಸ್ ಆಗಿದ್ದಾರೆ. ಸುಮಾರು 2 ಲಕ್ಷ ಗ್ರಾಹಕರ ಬೇಸ್ ನಮ್ಮಲ್ಲಿ ಸೃಷ್ಟಿಯಾಗಿದೆ ಮತ್ತು ಸುಮಾರು 25,000-30,000 ಜನ ಆರ್ಡರ್ ಗಳನ್ನು ಪ್ಲೇಸ್ ಮಾಡಿದ್ದಾರೆ. ನಮ್ಮ ಉತ್ಪಾದನೆಗಳನ್ನು ಯುಎಸ್, ದುಬೈ, ರಷ್ಯಾ ಮೊದಲಾದ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ,’ ಎಂದು ಕಂಪನಿಯ ಪೈನಾನ್ಸ್ ನಿರ್ದೇಶಕ ಅತುಲ್ ಗುಪ್ತಾ ಹೇಳುತ್ತಾರೆ.
ಅರಿಸ್ತಾ ವರ್ಲ್ಡ್ ಕಂಪನಿಯ ಉತ್ಪಾದನೆಗಳು ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಇಲಾಖೆಯಿಂದ ಬೆಂಬಲಿತವಾಗಿವೆ. ದುಬೈ, ಯುಎಸ್ ಅಲ್ಲದೆ ಇನ್ನಿತರ ಹಲವಾರು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ಪ್ರಾಡಕ್ಟ್ ಗಳನ್ನು ಮಾರುವ ಪ್ರಯತ್ನ ಕಂಪನಿ ನಡೆಸಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ