Karnataka Assembly Polls 2023: ವರುಣಾದಲ್ಲಿ ಬಿಜೆಪಿ ಸೋಮಣ್ಣರನ್ನು ಕಣಕ್ಕಿಳಿಸಿರುವುದು ಸಿದ್ದರಾಮಯ್ಯಗೆ ಅತಂಕ ಮೂಡಿಸಿದೆಯೇ?
ಸಾಮಾನ್ಯವಾಗಿ ಮಾಧ್ಯಮದವರೊಂದಿಗೆ ಮೃದುವಾಗಿ ಮಾತಾಡುವ ಸಿದ್ದರಾಮಯ್ಯ ಸಿಡುಕಿದ್ದನ್ನು ನೋಡಿದರೆ ಅತಂಕದಲ್ಲಿರುವುದು ಸ್ಪಷ್ಟವಾಗುತ್ತದೆ.
ಬೆಂಗಳೂರು: ವರುಣಾ ಕ್ಷೇತ್ರದಲ್ಲಿ ಬಿಜೆಪಿಯಿಂದ ತಮ್ಮ ವಿರುದ್ಧ ವಿ ಸೋಮಣ್ಣ (V Somanna) ಸ್ಪರ್ಧಿಸುತ್ತಿರುವುದು ಸಿದ್ದರಾಮಯ್ಯನವರಲ್ಲಿ (Siddaramaiah) ಭೀತಿ ಮೂಡಿಸಿದೆಯಾ? ಅವರ ವರ್ತನೆಯಿಂದ ಹಾಗನಿಸುತ್ತದೆ. ಈ ವಿಡಿಯೋ ನೋಡಿದರೆ ಅದು ನಿಮಗೆ ಸ್ಪಷ್ಟವಾಗುತ್ತದೆ. ಬೆಂಗಳೂರಲ್ಲಿ ಇಂದು ಅವರು ಕೆಪಿಸಿಸಿ ಕಚೇರಿಯಿಂದ (KPCC office) ಕಾರಲ್ಲಿ ತೆರಳುವಾಗ ಪತ್ರಕರ್ತರೊಬ್ಬರು ಸೋಮಣ್ಣ ನಿಮ್ಮ ವಿರುದ್ಧ ಸ್ಪರ್ಧಿಸುತ್ತಿದ್ದಾರೆ ಅಂತ ಹೇಳ ಹೊರಟಾಗ, ಮಾಡ್ಲಿ ಬಿಡಯ್ಯ. ನೀನೂ ಸ್ಪರ್ಧೆ ಮಾಡು ಅಂತ ಗದರಿಕೆಯ ಸ್ವರದಲ್ಲಿ ಹೇಳುತ್ತಾರೆ. ನಿಮ್ಮನ್ನು ಸೋಲಿಸಲು ಬಿಜೆಪಿ ಹೈಕಮಾಂಡ್ ಸೋಮಣ್ಣರನ್ನು ಕಣಕ್ಕಿಳಿಸಿದೆ ಅಂತ ಪತ್ರಕರ್ತರು ಹೇಳಿದಾಗ ಅವರು ಖಾರವಾಗಿ, ಅವರ ಹೈಕಮಾಂಡ್ ಹೇಳಿದರೆ ನಾನು ಸೋಲೋದಿಲ್ಲ. ಅದನ್ನು ಜನ ನಿರ್ಧರಿಸುತ್ತಾರೆ,’ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಮಾಧ್ಯಮದವರೊಂದಿಗೆ ಮೃದುವಾಗಿ ಮಾತಾಡುವ ಸಿದ್ದರಾಮಯ್ಯ ಸಿಡುಕಿದ್ದನ್ನು ನೋಡಿದರೆ ಅತಂಕದಲ್ಲಿರುವುದು ಸ್ಪಷ್ಟವಾಗುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
