Assembly Polls: ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡು ಅಳುತ್ತಿದ್ದ ಯಡಿಯೂರಪ್ಪರಿಗೆ ಯಾಕ್ರೀ ಕಣ್ಣೀರು ಅಂದಾಗ ಇದು ಕಣ್ಣೀರಲ್ಲ, ಪನ್ನೀರು ಎಂದರು!: ಸಿದ್ದರಾಮಯ್ಯ

|

Updated on: Apr 28, 2023 | 7:39 PM

ಲಿಂಗಾಯತ ನಾಯಕರನ್ನು ಬಿಜೆಪಿ  ಗೌರವಿಸುವುದಲ್ಲ ಅನ್ನೋದಿಕ್ಕೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಲಕ್ಷ್ನಣ ಸವದಿ ಸಾಕ್ಷಿ ಎಂದು ಸಿದ್ದರಾಮಯ್ಯ ಹೇಳಿದರು.

ರಾಯಚೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ರಾಜ್ಯದ ಪ್ರಮುಖ ರಾಜಕಾರಣಿ ಅಗಿರುವುದರ ಜೊತೆಗೆ ಸದನದಲ್ಲಿ ಕನ್ನಡದ ಮೇಷ್ಟ್ರು ಆಗುತ್ತಾರೆ, ಸ್ವಗ್ರಾಮದ ಜಾತ್ರೆಯಲ್ಲಿ ಬಾಲ್ಯದ ಗೆಳೆಯರೊಂದಿಗೆ ವೀರಗಾಸೆ ಕುಣಿತ (fold dance) ಮಾಡುತ್ತಾರೆ ಅದು ಸಾಲದೆಂಬಂತೆ ಚುನಾವಣಾ ಸಭೆಗಳಲ್ಲಿ ಭಾಷಣ ಮಾಡುವಾಗ ಮಿಮಿಕ್ರಿಯನ್ನೂ (mimicry) ಮಾಡುತ್ತಾರೆ. ರಾಯಚೂರಿನ ಲಿಂಗಸೂಗೂರು ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಇಂದು ಮತ ಯಾಚಿಸುವಾಗ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರನ್ನು ಬಿಜೆಪಿ ಸ್ಥಾನದಿಂದ ಕೆಳಗಿಳಿಸಿದಾಗ ಹೇಗೆ ಅತ್ತರು ಅನ್ನೋದನ್ನು ಮಿಮಿಕ್ ಮಾಡಿ ತೋರಿಸಿದರು. ಸಿದ್ದರಾಮಯ್ಯ ‘ಯಾಕ್ರೀ ಅಳ್ತೀರಾ?’ ಅಂತ ಕೇಳಿದಾಗ ಯಡಿಯೂರಪ್ಪ, ‘ಅಳುತ್ತಿಲ್ಲ ಇದು ಅನಂದಭಾಷ್ಪ’ ಎಂದರಂತೆ! ಲಿಂಗಾಯತ ನಾಯಕರನ್ನು ಬಿಜೆಪಿ  ಗೌರವಿಸುವುದಲ್ಲ ಅನ್ನೋದಿಕ್ಕೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಲಕ್ಷ್ನಣ ಸವದಿ ಸಾಕ್ಷಿ ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 28, 2023 06:46 PM