ಆಸ್ಪತ್ರೆಗೆ ತೆರಳಿ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ; ರಾಜಕೀಯ-ವೈಯಕ್ತಿಕ ಬಾಂಧವ್ಯ ಬೇರೆ ಬೇರೆ ಅಂತ ಪುನಃ ಪ್ರೂವ್ ಮಾಡಿದ ಮುಖ್ಯಮಂತ್ರಿ!

|

Updated on: Aug 31, 2023 | 7:39 PM

ಸಿದ್ದರಾಮಯ್ಯನವರ ಜನಪ್ರಿಯತೆ ದಂಗಾಗಿಸುತ್ತದೆ ಮಾರಾಯ್ರೇ. ಆಸ್ಪತ್ರೆಯ ಹೊರಗಡೆ ಅವರ ಅಭಿಮಾನಿಗಳಿದ್ದಾರೆ ಮತ್ತು ಒಳಗಡೆ ಕೂಡ ಇರೋದನ್ನು ಕಾಂಬಹುದು. ಅದೇನೇ ಇರಲಿ, ಸಿದ್ದರಾಮಯ್ಯ ರಾಜಕೀಯವನ್ನು ವೈಯಕ್ತಿಕ ಬದುಕು-ಬಾಂಧವ್ಯಗಳಿಂದ ದೂರ ಇಟ್ಟರುವುದು ಕನ್ನಡಿಗರಿಗೆ ಖುಷಿ ನೀಡುತ್ತದೆ. ಕಳೆದ ತಿಂಗಳಷ್ಟೇ ಅವರು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ ತಮ್ಮ ಮತ್ತೊಬ್ಬ ಕಡು ರಾಜಕೀಯ ವೈರಿ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.

ಬೆಂಗಳೂರು: ವಿಧಾನ ಸಭೆಯಲ್ಲಿ ಮತ್ತು ಅದರ ಹೊರಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಥೇಟ್ ಹಾವು-ಮುಂಗಸಿ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗಾಗದು, ಪರಸ್ಪರ ಟೀಕಿಸುತ್ತಿರುತ್ತಾರೆ ಮತ್ತು ಕೆಂಡ ಕಾರುತ್ತಿರುತ್ತಾರೆ. ಆದರೆ, ವೈಯಕ್ತಿಕವಾಗಿ ಅವರ ನಡುವೆ ಯಾವುದೇ ವೈಷಮ್ಯವಿಲ್ಲ. ಕುಮಾರಸ್ವಾಮಿ ಅನಾರೋಗ್ಯದಿಂದ ಬಳಲುತ್ತಿರುವುದು, ಜಯನಗರದ ಅಪೊಲ್ಲೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದು ವ್ಯಾಪಕವಾಗಿ ವರದಿಯಾಗಿದೆ. ಅವರನ್ನು ಮಾತಾಡಿಸಿ ಆರೋಗ್ಯ ವಿಚಾರಿಸಲು ಸಿದ್ದರಾಮಯ್ಯ ಇಂದು ಸಾಯಂಕಾಲ ಆಸ್ಪತ್ರೆಗೆ ಭೇಟಿ ನೀಡಿದರು. ಮುಖ್ಯಮಂತ್ರಿಯೊಂದಿಗೆ ಕುಮಾರಸ್ವಾಮಿಯವರ ಮತ್ತೊಬ್ಬ ಬದ್ಧ ರಾಜಕೀಯ ವೈರಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ಇದ್ದರು. ಸಿದ್ದರಾಮಯ್ಯನವರ ಜನಪ್ರಿಯತೆ ದಂಗಾಗಿಸುತ್ತದೆ ಮಾರಾಯ್ರೇ. ಆಸ್ಪತ್ರೆಯ ಹೊರಗಡೆ ಅವರ ಅಭಿಮಾನಿಗಳಿದ್ದಾರೆ ಮತ್ತು ಒಳಗಡೆ ಕೂಡ ಇರೋದನ್ನು ಕಾಂಬಹುದು. ಅದೇನೇ ಇರಲಿ, ಸಿದ್ದರಾಮಯ್ಯ ರಾಜಕೀಯವನ್ನು ವೈಯಕ್ತಿಕ ಬದುಕು-ಬಾಂಧವ್ಯಗಳಿಂದ ದೂರ ಇಟ್ಟರುವುದು ಕನ್ನಡಿಗರಿಗೆ ಖುಷಿ ನೀಡುತ್ತದೆ. ಕಳೆದ ತಿಂಗಳಷ್ಟೇ ಅವರು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ ತಮ್ಮ ಮತ್ತೊಬ್ಬ ಕಡು ರಾಜಕೀಯ ವೈರಿ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ