ಸಿಗರೇಟ್ ಸೇದುವ ಬಗ್ಗೆ ಸ್ಪಂದನಾಗೆ ಇದ್ದ ಅಭಿಪ್ರಾಯ ಏನು? ವಿಜಯ್ ರಾಘವೇಂದ್ರ ಹೇಳಿದ್ದಿಷ್ಟು..
ಈ ಸಂದರ್ಶನದಲ್ಲಿ ಸ್ಪಂದನಾ ಬಗ್ಗೆ ವಿಜಯ್ ರಾಘವೇಂದ್ರ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹೃದಯಾಘಾತದಿಂದ ಪತ್ನಿಯನ್ನು ಕಳೆದುಕೊಂಡ ನೋವು ಅವರನ್ನು ಕಾಡುತ್ತಿದೆ. ಆದರೆ ನೆನಪುಗಳು ಹಸಿರಾಗಿವೆ. ಸಿಗರೇಟ್ ಸೇದುವ ಬಗ್ಗೆ ಸ್ಪಂದನಾಗೆ ಯಾವ ರೀತಿಯ ಅಭಿಪ್ರಾಯ ಇತ್ತು ಎಂಬುದನ್ನು ವಿಜಯ್ ರಾಘವೇಂದ್ರ ಈಗ ನೆನಪಿಸಿಕೊಂಡಿದ್ದಾರೆ.
ನಟ ವಿಜಯ್ ರಾಘವೇಂದ್ರ (Vijay Raghavendra) ಅವರು ರಿಯಲ್ ಲೈಫ್ನಲ್ಲಿ ಸಿಗರೇಟ್ ಸೇದುವುದಿಲ್ಲ. ಆದರೆ ಪಾತ್ರದ ಸಲುವಾಗಿ ಕೆಲವೊಮ್ಮೆ ಸಿಗರೇಟ್ ಸೇದಬೇಕಾಗುವುದು ಅನಿವಾರ್ಯ. ‘ಕದ್ದ ಚಿತ್ರ’ ಸಿನಿಮಾದಲ್ಲೂ ಅಂಥ ಒಂದು ದೃಶ್ಯ ಇದೆ. ಅದಕ್ಕಾಗಿ ತಾವು ಸಿಗರೇಟ್ ಸೇದಿದಾಗ ಏನಾಯಿತು ಎಂಬುದನ್ನು ವಿಜಯ್ ರಾಘವೇಂದ್ರ ಅವರು ವಿವರಿಸಿದ್ದಾರೆ. ಅವರ ಪತ್ನಿ ಸ್ಪಂದನಾಗೆ ಸಿಗರೇಟ್ (Cigarette) ಬಗ್ಗೆ ವಿರೋಧ ಇತ್ತು. ಅವರು ಎಂದಿಗೂ ಧೂಮಪಾನವನ್ನು ಪ್ರಚೋದಿಸುತ್ತಿರಲಿಲ್ಲ. ಇಂದು ಸ್ಪಂದನಾ (Spandana Vijay Raghavendra) ಅವರು ನಮ್ಮೊಂದಿಗೆ ಇಲ್ಲ. ಹೃದಯಾಘಾತದಿಂದ ನಿಧನರಾದ ಪತ್ನಿಯ ನೆನಪು ವಿಜಯ್ ರಾಘವೇಂದ್ರ ಅವರನ್ನು ಕಾಡುತ್ತಿದೆ. ಅದರ ನಡುವೆಯೂ ಅವರು ‘ಕದ್ದ ಚಿತ್ರ’ ಸಿನಿಮಾಗೆ ಪ್ರಮೋಷನ್ ಮಾಡುತ್ತಿದ್ದಾರೆ. ಈ ಸಂದರ್ಶನದಲ್ಲಿ ಸ್ಪಂದನಾ ಬಗ್ಗೆ ವಿಜಯ್ ರಾಘವೇಂದ್ರ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?

ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP

ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ

ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
