Assembly Polls 2023: ಹತ್ತು ಕೇಜಿ ಅಕ್ಕಿ ಫ್ರೀಯಾಗಿ ಕೊಡ್ತೀವಿ ಅಂದ್ರೆ ನಿಮ್ಗೆ ಸಂತೋಷವಾಗ್ಲಿಲ್ವಾ ಅಂತ ಹೂವಿನ ಹಡಗಲಿ ಜನರನ್ನು ಸಿದ್ದರಾಮಯ್ಯ ಕೇಳಿದರು!

|

Updated on: Apr 26, 2023 | 7:10 PM

ಪಕ್ಷದ ಅಭ್ಯರ್ಥಿ ಪಿಟಿ ಪರಮೇಶ್ವರ್ ನಾಯಕ್ ಅವರ ಪರ ಮತ ಯಾಚನೆ ಮಾಡುವಾಗ ಕಾಂಗ್ರೆಸ್ ನೀಡಿರುವ ಆಶ್ವಾಸನೆಗಳನ್ನು ಸಿದ್ದರಾಮಯ್ಯ ಪುನರಾವರ್ತಿಸಿದರು.

ವಿಜಯನಗರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು ಜಿಲ್ಲೆಯ ಹೂವಿನ ಹಡಗಲಿಯಲ್ಲಿ (Huvina Hadagali) ಪಕ್ಷದ ಅಭ್ಯರ್ಥಿ ಪಿಟಿ ಪರಮೇಶ್ವರ್ ನಾಯಕ್ (PT Parameshwara Naik) ಅವರ ಪರ ಮತ ಯಾಚನೆ ಮಾಡುವಾಗ ಕಾಂಗ್ರೆಸ್ ನೀಡಿರುವ ಆಶ್ವಾಸನೆಗಳನ್ನು ಪುನರಾವರ್ತಿಸಿದರು. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ಗೃಹಿಣಿಯರಿಗೆ ಮಾಸಿಕ ರೂ. 2,000 ಸಹಾಯ ಧನ ನೀಡುವುದಾಗಿ ಹೇಳಿದ ನಂತರ ಅವರು ಮೊದಲು ತಮ್ಮ ಸರ್ಕಾರ ಆಧಿಕಾರದಲ್ಲಿದ್ದಾಗ ಕೊಡುತ್ತಿದ್ದ 7 ಕೇಜಿ ಅಕ್ಕಿಯನ್ನು ಬಿಜೆಪಿ ಸರ್ಕಾರ 5 ಕೇಜಿಗೆ ಇಳಿಸಿತ್ತು, ಅದರೆ ಕಾಂಗ್ರೆಸ್ ಅದನ್ನು 10 ಕೇಜಿಗೆ ಹೆಚ್ಚಿಸುವುದು ಎಂದು ಹೇಳಿದರು. ಅವರ ಮಾತಿಗೆ ನಿರೀಕ್ಷಿತ ಪ್ರತಿಕ್ರಿಯೆ ಬಾರದೇ ಹೋದಾಗ ‘ಯಾಕಪ್ಪ ನಿಮಗೆ 10 ಕೇಜಿ ಅಕ್ಕಿ ಉಚಿತವಾಗಿ ನೀಡುತ್ತೇವೆ ಅಂತ ಹೇಳಿದರೆ ಸಂತೋಷವಾಗಲಿಲ್ಲವಾ?’ ಅಂತ ಕೇಳುತ್ತಾರೆ. ಜನ ಆಗ ಹೋ ಅಂತ ಕಿರುಚುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 26, 2023 07:09 PM