ಸಿದ್ದರಾಮಯ್ಯನವರ ಅಧಿಕೃತ ನಿವಾಸಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಬೆಂಬಲಿಗರ ಆಗಮನ, ಕಂಬಳಿ ಹೊದಿಸಿ ಸನ್ಮಾನ

Edited By:

Updated on: Nov 23, 2022 | 2:41 PM

ಅಲ್ಲಿ ಬಂದಿದ್ದ ಕಾರ್ಯಕರ್ತರಲ್ಲಿ ಕೆಲವರು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಯವಾಗಲಿ ಎಂದು ಕೂಗಿದರು. ಖುದ್ದು ಸಿದ್ದರಾಮಯ್ಯನವರಿಗೆ ಈ ಜೈಕಾರ ಕೇಳಿಸಿಕೊಂಡು ಸಾಕಾಗಿರಬಹುದು!

ಬೆಂಗಳೂರು: ಚುನಾವಣೆಗಳು (Assembly polls) ಕ್ರಮೇಣ ಹತ್ತಿರವಾಗುತ್ತಿದ್ದಂತೆಯೇ ರಾಜ್ಯದ ಬೇರೆ ಬೇರೆ ಭಾಗದ ಬೆಂಬಲಿಗರು ಮತ್ತು ಕಾರ್ಯಕರ್ತರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು (Siddaramaiah) ಭೇಟಿಯಾಗುತ್ತಿದ್ದಾರೆ. ಬುಧವಾರ ಬೆಳಗ್ಗೆ ಬೆಂಗಳೂರಿನಲ್ಲಿರುವ ಸಿದ್ದರಾಮಯ್ಯನವರ ಅಧಿಕೃತ ನಿವಾಸಕ್ಕೆ (Official Residence) ಆಗಮಿಸಿದ ಅಭಿಮಾನಿಗಳು ಕಂಬಳಿ ಹೊದಿಸಿ ಸನ್ಮಾನಿಸಿದರು. ಅಲ್ಲಿ ಬಂದಿದ್ದ ಕಾರ್ಯಕರ್ತರಲ್ಲಿ ಕೆಲವರು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಯವಾಗಲಿ ಎಂದು ಕೂಗಿದರು. ಖುದ್ದು ಸಿದ್ದರಾಮಯ್ಯನವರಿಗೆ ಈ ಜೈಕಾರ ಕೇಳಿಸಿಕೊಂಡು ಸಾಕಾಗಿರಬಹುದು!

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ