5 ವರ್ಷವೂ ನಾನೇ ಸಿಎಂ: ವಿರೋಧಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟಕ್ಕರ್
ಐದು ವರ್ಷವೂ ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಹಿಂದೆಯೂ ಬಿಜೆಪಿಯವರು ನಾನು ಬಜೆಟ್ ಮಂಡಿಸಲ್ಲ ಎಂದು ಹೇಳಿದ್ದರು. ಆದರೆ ನಾನು ಬಜೆಟ್ ಮಂಡಿಸಿ, ಅಧಿಕಾರ ಪೂರ್ಣಗೊಳಿಸಿದ್ದೆ. ಈಗ ಎರಡನೇ ಬಾರಿಗೂ ರಾಜ್ಯ ಮುಖ್ಯಮಂತ್ರಿ ಆಗಿದ್ದೇನೆ. ಸಿಎಂ ಆಗಿ ಎರಡೂವರೆ ವರ್ಷ ಅವಧಿ ಮುಗಿಸಿದ್ದು, ಮುಂದೆಯೂ ಇರ್ತೇನೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಮೈಸೂರು, ಅಕ್ಟೋಬರ್ 01: ಐದು ವರ್ಷ ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ. ಬಿಜೆಪಿಯವರು (BJP) ಹೇಳಿದ ಯಾವ ಭವಿಷ್ಯವೂ ನಿಜವಾಗಿಲ್ಲ. ಅವರಿಗೆ ಭವಿಷ್ಯ ಹೇಳುವುದಕ್ಕೆ ಬರಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ನವೆಂಬರ್ ಕ್ರಾಂತಿ ಬಗ್ಗೆ ಮೈಸೂರಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಹೈಕಮಾಂಡ್ ಹೇಳಿದಂತೆ ನಾವು ನಡೆದುಕೊಳ್ಳಬೇಕು. ಈ ಹಿಂದೆಯೂ ಬಿಜೆಪಿಯವರು ನಾನು ಬಜೆಟ್ ಮಂಡಿಸಲ್ಲ ಎಂದು ಹೇಳಿದ್ದರು. ಆದರೆ ನಾನು ಬಜೆಟ್ ಮಂಡಿಸಿ, ಅಧಿಕಾರ ಪೂರ್ಣಗೊಳಿಸಿದ್ದೆ. ಈಗ ಎರಡನೇ ಬಾರಿಗೂ ರಾಜ್ಯ ಮುಖ್ಯಮಂತ್ರಿ ಆಗಿದ್ದೇನೆ. ಸಿಎಂ ಆಗಿ ಎರಡೂವರೆ ವರ್ಷ ಅವಧಿ ಮುಗಿಸಿದ್ದು, ಮುಂದೆಯೂ ಇರ್ತೇನೆ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
