ಅಧ್ಯಕ್ಷರೇ, ಕುಮಾರಸ್ವಾಮಿ ಸದನದ ಕಾಲಹರಣ ಮಾಡುತ್ತಿದ್ದಾರೆ; ನೀವು ಅದಕ್ಕೆ ಅವಕಾಶ ನೀಡುತ್ತಿರುವಿರಿ: ಸ್ಪೀಕರ್​ಗೆ ಹೇಳಿದರು ಸಿದ್ದರಾಮಯ್ಯ

ಅಧ್ಯಕ್ಷರೇ, ಕುಮಾರಸ್ವಾಮಿ ಸದನದ ಕಾಲಹರಣ ಮಾಡುತ್ತಿದ್ದಾರೆ; ನೀವು ಅದಕ್ಕೆ ಅವಕಾಶ ನೀಡುತ್ತಿರುವಿರಿ: ಸ್ಪೀಕರ್​ಗೆ ಹೇಳಿದರು ಸಿದ್ದರಾಮಯ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 10, 2022 | 5:04 PM

ಆಗ ತಾಳ್ಮೆ ಕಳೆದುಕೊಳ್ಳುವ ಸ್ಪೀಕರ್ ಕಾಗೇರಿ ಅವರು, ‘ನೀವು ಹೊರಗಡೆ ಹೋಗಿ ಎಷ್ಟು ದಿನಗಳ ಕಾಲ ಬೇಕಾದರೂ ಮಾತಾಡಿಕೊಳ್ಳಿ, ಇಲ್ಲಿ ಸದನದ ಸಮಯ ವ್ಯರ್ಥವಾಗುತ್ತಿದೆ, ಇನ್ನೆರಡು ನಿಮಿಷಗಳಲ್ಲಿ ನಿಮ್ಮ ಮಾತು ಮುಗಿಸಿ,’ ಎಂದು ಕುಮಾರಸ್ವಾಮಿ ಅವರಿಗೆ ಹೇಳುತ್ತಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ (JDS Legislature Party) ನಾಯಕ ಹೆಚ್ ಡಿ ಕುಮಾರಸ್ವಾಮಿ ನಡುವೆ ಗುರುವಾರ ಸದನದಲ್ಲಿ ನಡೆದ ಮಾತಿನ ಯುದ್ಧ ತಾರಕಕ್ಕೇರಿದಾಗ ಅದನ್ನು ಕೊನೆಗೊಳಿಸಲು ವಿಧಾನ ಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshvar Hegde Kageri) ಅವರು ಮಧ್ಯೆಪ್ರವೇಶಿಸಿ ನಡೆಸಿದ ಪ್ರಯತ್ನವೂ ಸಫಲಗೊಳ್ಳಲಿಲ್ಲ. ಕುಮಾರಸ್ವಾಮಿಯರು ಈಗಲ್ ಟನ್ ರೆಸಾರ್ಟ್ (Eagleton Resort) ಗೆ ನೀಡಲಾದ 28 ಎಕರೆ ಜಮೀನಿನ ಬಗ್ಗೆ ಎಲ್ಲ ದಾಖಲೆಗಳನ್ನು ಸದನಕ್ಕೆ ತೆಗೆದುಕೊಂಡು ಬಂದಿದ್ದರು ಮತ್ತು ಅವುಗಳನ್ನು ಓದುವುದರಲ್ಲಿ ಸಾಕಷ್ಟು ಸಮಯವನ್ನು ವ್ಯರ್ಥ ಮಾಡಿದ್ದರಿಂದ ಸ್ಪೀಕರ್ ಕಾಗೇರಿ ಅವರು ಆಕ್ಷೇಪಣೆ ವ್ಯಕ್ತಪಡಿಸಿದರು. ಅದರೆ ಕುಮಾರಸ್ವಾಮಿ ಸುಮ್ಮನಾಗುವ ಕುರುಹೇ ತೋರಲಿಲ್ಲ. ಅವರ ಉದ್ದೇಶ ಪ್ರಾಯಶಃ ಸಿದ್ದರಾಮಯ್ಯನವರನ್ನು ಇಕ್ಕಟ್ಟಿಗೆ ಸಿಲುಕಿಸುವುದಾಗಿತ್ತು.

ಅವರ ಸತತ ಟೀಕೆಯಿಂದ ಕೋಪಗೊಂಡ ಸಿದ್ದರಾಮಯ್ಯನವರು, ಇಂಥ ನಿಷ್ಪ್ರಯೋಜಕ ವಿಷಯಗಳನ್ನು ಚರ್ಚಿಸುವ ಬದಲು ಬಜೆಟ್ ಮೇಲೆ ಮಾತಾಡಿ ಎಂದು ಹೇಳುತ್ತಾ, ಸುಳ್ಳುಗಳ ಬಗ್ಗೆ ಮಾತಾಡುವುದಾದರೆ ನಾನು 10 ದಿನಗಳ ಕಾಲ ಮಾತಾಡಬಲ್ಲೆ, ಎಂದು ಹೇಳಿದಾಗ ಕುಮಾರಸ್ವಾಮಿ ಅವರು ವರ್ಷಗಟ್ಟಲೆ ಮಾತಾಡುವಷ್ಟು ಸರಕು ನನ್ನಲ್ಲಿದೆ ಎಂದು ಹೇಳುತ್ತಾರೆ.

ಆಗ ತಾಳ್ಮೆ ಕಳೆದುಕೊಳ್ಳುವ ಸ್ಪೀಕರ್ ಕಾಗೇರಿ ಅವರು, ‘ನೀವು ಹೊರಗಡೆ ಹೋಗಿ ಎಷ್ಟು ದಿನಗಳ ಕಾಲ ಬೇಕಾದರೂ ಮಾತಾಡಿಕೊಳ್ಳಿ, ಇಲ್ಲಿ ಸದನದ ಸಮಯ ವ್ಯರ್ಥವಾಗುತ್ತಿದೆ, ಇನ್ನೆರಡು ನಿಮಿಷಗಳಲ್ಲಿ ನಿಮ್ಮ ಮಾತು ಮುಗಿಸಿ,’ ಎಂದು ಕುಮಾರಸ್ವಾಮಿ ಅವರಿಗೆ ಹೇಳುತ್ತಾರೆ.

ಕುಮಾರಸ್ವಾಮಿಯವರು ಪುನಃ ಅದೇ ವಿಷಯವನ್ನು ಮಾತಾಡಲು ಪ್ರಾರಂಭಿಸಿದಾಗ ಸಿದ್ದರಾಮಯ್ಯನವರು, ಬಜೆಟ್ ಮೇಲೆ ಮಾತಾಡಿ, ಕೆಲಸಕ್ಕೆ ಬಾರದ ಮಾತುಗಳನ್ನು ಆಡಬೇಡಿ ಅಂತ ಕುಮಾರಸ್ವಾಮಿ ಅವರಿಗೆ ಹೇಳುತ್ತಾ. ಸ್ಪೀಕರ್ ಕಡೆ ತಿರುಗಿ, ‘ಅಧ್ಯಕ್ಷರೇ, ನೀವು ಇಂಥಕ್ಕೆಲ್ಲ ಅನುಮತಿ ನೀಡುತ್ತಿರುವಿರಿ,’ ಎನ್ನುತ್ತಾರೆ.

ಸ್ಪೀಕರ್ ಅವರು ಮತ್ತೊಮ್ಮೆ ಬೇಗ ಮುಗಿಸಿ ಅಂತ ಹೇಳಿದ ಬಳಿಕ, ‘ನನ್ನ ಬಳಿ ದಾಖಲೆಗಳಿವೆ, ಅವುಗಳನ್ನು ಮುಖ್ಯಮಂತ್ರಿಗಳಿಗೆ ಕೊಡುತ್ತೇನೆ, ತನಿಖೆಯಾಗಬೇಕು,’ ಅಂತ ಹೇಳುತ್ತಾ ಕೂತುಕೊಂಡಾಗ ಕಾಗೇರಿ ಅವರು ನಿಟ್ಟುಸಿರಾಗುತ್ತಾರೆ.

ಇದನ್ನೂ ಓದಿ:  ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ಸದನದಲ್ಲಿ ಮಾತಿನ ಚಕಮಕಿ!