ಎನ್​ಇಪಿಯನ್ನು ತಿರಸ್ಕರಿಸುತ್ತೇವೆ ಎನ್ನುವ ಸಿದ್ದರಾಮಯ್ಯ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಸಿಗುವುದನ್ನು ವಿರೋಧಿಸುತ್ತಾರೆಯೇ? ಸಿಟಿ ರವಿ

|

Updated on: Aug 16, 2023 | 6:02 PM

ಕೌಶಲ್ಯಗಳ ತರಬೇತಿ ಹೊಂದಿ ಮಕ್ಕಳಿ ಸ್ವಾವಲಂಬಿ ಬದುಕು ನಡೆಸುವಂತಾಗುವುದು ಸಿದ್ದರಾಮಯ್ಯನವರಿಗೆ ಇಷ್ಟವಿಲ್ಲವೇ? ತಾಂತ್ರಿಕ ಶಿಕ್ಷಣದ ಜೊತೆಗೆ ಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ಒದಗಿಸುವ ಎನ್ ಇಪಿಯನ್ನು ಯಾವ ಕಾರಣಗಳಿಗಾಗಿ ತಿರಸ್ಕರಿಸುತ್ತಿದ್ದೇವೆ ಅನ್ನೋದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಅಂತ ಸಿಟಿ ರವಿ ಆಗ್ರಹಿಸಿದರು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನಿನ್ನೆ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭಲ್ಲಿ ಭಾಷಣ ಮಾಡುವಾಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ತಮ್ಮ ಸರಕಾರ ತಿರಸ್ಕರಿಸುತ್ತದೆ ಅಂತ ಹೇಳಿದ್ದನ್ನು ಬಿಜೆಪಿ ನಾಯಕ ಸಿಟಿ ರವಿ (CT Ravi) ಇಂದು ಪ್ರಶ್ನಿಸಿದರು. ಡಾ ಕಸ್ತೂರಿ ರಂಗನ್ (Dr Kasturi Rangan) ನೇತೃತ್ವದಲ್ಲಿ, ಹಲವಾರು ಶಿಕ್ಷಣ ತಜ್ಞರು ಸೇರಿ, ಸಾವಿರಾರು ಜನರ ಅಭಿಪ್ರಾಯ ಸಂಗ್ರಹಿಸಿ ರೂಪಿಸಿರುವ ಸಮಗ್ರ ಶಿಕ್ಷಣ ನೀತಿಯನ್ನು ಸಿದ್ದರಾಮಯ್ಯ ಸರ್ಕಾರ ಯಾಕೆ ತಿರಸ್ಕರಿಸುತ್ತದೆ? ಎನ್ ಇಪಿಯಲ್ಲಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಆಗಬೇಕು ಅಂತ ಹೇಳಿದೆ. ಅಂದರೆ ಸಿದ್ದರಾಮಯ್ಯ ಸರ್ಕಾರ ಮಾತೃಭಾಷೆ ವಿರೋಧಿಯೇ ಅಂತ ರವಿ ಕೇಳಿದರು. ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿಯಾಗಲು ಆ ದಿಶೆಯಲ್ಲಿ ತರಬೇತಿ ನೀಡಬೇಕೆಂದು ಎನ್ ಇಪಿ ಹೇಳುತ್ತದೆ. ಕೌಶಲ್ಯಗಳ ತರಬೇತಿ ಹೊಂದಿ ಮಕ್ಕಳಿ ಸ್ವಾವಲಂಬಿ ಬದುಕು ನಡೆಸುವಂತಾಗುವುದು ಸಿದ್ದರಾಮಯ್ಯನವರಿಗೆ ಇಷ್ಟವಿಲ್ಲವೇ? ತಾಂತ್ರಿಕ ಶಿಕ್ಷಣದ ಜೊತೆಗೆ ಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ಒದಗಿಸುವ ಎನ್ ಇಪಿಯನ್ನು ಯಾವ ಕಾರಣಗಳಿಗಾಗಿ ತಿರಸ್ಕರಿಸುತ್ತಿದ್ದೇವೆ ಅನ್ನೋದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಅಂತ ಸಿಟಿ ರವಿ ಆಗ್ರಹಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on