Karnataka Assembly Polls: ವರುಣಾ ಕ್ಷೇತ್ರದ ಗ್ರಾಮವೊಂದರಲ್ಲಿ ಉರಿಬಿಸಿಲ್ಲಿ ಕಾದುನಿಂತಿದ್ದ ಅಜ್ಜಿಯೊಂದಿಗೆ ಮಾತಾಡಿದ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ

Updated on: Apr 22, 2023 | 6:00 PM

ಸಿದ್ದರಾಮಯ್ಯ ಆಕೆಯತ್ತ ವಾಲಿದಾಗ ಅಜ್ಜಿ ಅವರ ಕಿವಿಯಲ್ಲಿ ಏನನ್ನೋ ಹೇಳುತ್ತಾರೆ. ಅದನ್ನು ಕೇಳಿಸಿಕೊಳ್ಳುವ ಸಿದ್ದರಾಮಯ್ಯ ಆಯ್ತು ಸರಿ ಎನ್ನುವಂತೆ ತಲೆಯಾಡಿಸುತ್ತಾರೆ.

ಮೈಸೂರು: ವರುಣಾ ಕ್ಷೇತ್ರದ ಕಾರ್ಯ (Karya) ಹೆಸರಿನ ಗ್ರಾಮದಲ್ಲಿ ಸಿದ್ದರಾಮಯ್ಯನವರ (Siddaramaiah) ಭೇಟಿಗಾಗಿ ಸುಡು ಬಿಸಿಲಲ್ಲಿ ಕಾದು ನಿಂತಿದ್ದ ವೃದ್ಧೆಯನ್ನು (elderly woman) ನೋಡಿ ನಿಮಗೆ ಶಬರಿ ನೆನಪಾದರೆ ಉತ್ಪ್ರೇಕ್ಷೆ ಅನಿಸದು. ಅಜ್ಜಿಯ ಆಸೆ ಸಿದ್ದರಾಮಯ್ಯನವರನ್ನು ಭೇಟಿಯಾಗುವುದಷ್ಟೇ ಆಗಿರಲಿಲ್ಲ, ಅವರನ್ನು ಮಾತಾಡಿಸಿ ಏನನ್ನೋ ಹೇಳಬೇಕಾಗಿತ್ತು. ಸಿದ್ದರಾಮಯ್ಯ ಅಜ್ಜಿಯ ಹತ್ತಿರ ಬಂದಾಗ ಅಲ್ಲಿದ್ದ ಜನ, ‘ಮಾತಾಡು ಅಜ್ಜಿ ಮಾತಾಡು..’ ಅನ್ನುತ್ತಾರೆ. ಅಜ್ಜಿ ತಮ್ಮೆಡೆ ನಡೆದು ಬರುತ್ತಿರುವುದನ್ನು ನೋಡುವ ಸಿದ್ದರಾಮಯ್ಯ, ‘ಏನ್ ಅಜ್ಜೀ?’ ಅನ್ನುತ್ತಾರೆ. ಜನರ ಗಲಾಟೆಯಲ್ಲಿ ಆಕೆ ಹೇಳುವುದು ಕೇಳದ ಕಾರಣ, ಸಿದ್ದರಾಮಯ್ಯ ಆಕೆಯತ್ತ ವಾಲಿದಾಗ ಅಜ್ಜಿ ಅವರ ಕಿವಿಯಲ್ಲಿ ಏನನ್ನೋ ಹೇಳುತ್ತಾರೆ. ಅದನ್ನು ಕೇಳಿಸಿಕೊಳ್ಳುವ ಸಿದ್ದರಾಮಯ್ಯ ಆಯ್ತು ಸರಿ ಎನ್ನುವಂತೆ ತಲೆಯಾಡಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.