Karnataka Assembly Polls: ವರುಣಾದಲ್ಲಿ ಜನಸಾಮಾನ್ಯ ಮತ್ತು ಸಿದ್ದರಾಮಯ್ಯ ನಡುವಿನ ಮಾತುಕತೆಗೆ ಬೆಂಬಲಿಗರಿಂದಲೇ ಅಡ್ಡಿ!

Karnataka Assembly Polls: ವರುಣಾದಲ್ಲಿ ಜನಸಾಮಾನ್ಯ ಮತ್ತು ಸಿದ್ದರಾಮಯ್ಯ ನಡುವಿನ ಮಾತುಕತೆಗೆ ಬೆಂಬಲಿಗರಿಂದಲೇ ಅಡ್ಡಿ!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 22, 2023 | 5:18 PM

ಗ್ರಾಮವೊಂದರಲ್ಲಿ ಅವರು ಪ್ರಚಾರ ಕಾರ್ಯಪೂರೈಸಿ ತೆರಳುವಾಗ ಅಲ್ಲಿಯ ಹಿರಿಯರೊಬ್ಬರು ಏನನ್ನೋ ಹೇಳಲು ಪ್ರಯತ್ನಿಸುತ್ತಾರೆ.

ಮೈಸೂರು: ಶುಕ್ರವಾರ ಮೈಸೂರು ಜಿಲ್ಲೆಯಲ್ಲಿ ಬಿಜೆಪಿ ನಾಯಕರು (BJP leaders) ಅಬ್ಬರದ ಚುನಾವಣಾ ಪ್ರಚಾರ ನಡೆಸಿದರು. ಇಂದು ಕೂಡ ಮಾಡುತ್ತಿದ್ದಾರೆ ಆ ವಿಷಯ ಬೇರೆ. ಅದರೆ ಮಾಧ್ಯಮಗಳ ಹೆಚ್ಚಿನ ಫೋಕಸ್ ಇವತ್ತು ಲೋಕಲ್ ಬಾಯ್ ಸಿದ್ದರಾಮಯ್ಯನವರ (Siddaramaiah) ಮೇಲಿದೆ. ವಿರೋಧ ಪಕ್ಷದ ನಾಯಕ ವರುಣಾ ಕ್ಷೇತ್ರದಲ್ಲಿ (Varuna constituency) ಹಳ್ಳಿಹಳ್ಳಿಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಅವರು ಹೋದೆಡೆಯೆಲ್ಲ ಅದ್ದೂರಿ ಸ್ವಾಗತ ಸಿಗುತ್ತಿದೆ. ಗ್ರಾಮವೊಂದರಲ್ಲಿ ಅವರು ಪ್ರಚಾರ ಕಾರ್ಯಪೂರೈಸಿ ತೆರಳುವಾಗ ಅಲ್ಲಿಯ ಹಿರಿಯರೊಬ್ಬರು ಏನನ್ನೋ ಹೇಳಲು ಪ್ರಯತ್ನಿಸುತ್ತಾರೆ. ಅವರು ಹೇಳುವುದನ್ನು ಕೇಳಿಸಿಕೊಳ್ಳುವ ಆಸಕ್ತಿ ಸಿದ್ದರಾಮಯ್ಯ ತೋರುತ್ತಾರಾದರೂ ಅಲ್ಲಿ ನೆರದಿದ್ದ ಕಾರ್ಯಕರ್ತರು ಮತ್ತು ಬೆಂಬಲಿಗರು ಆ ಯಜಮಾನರಿಗೆ ಮಾತಾಡಲು ಬಿಡುವುದಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ