Karnataka Assembly Polls 2023; ಟಿಕೆಟ್ ಸಿಗದ ನಿರಾಸೆಗಿಂತ ಸಿದ್ದರಾಮಯ್ಯನವರ ಪ್ರಯತ್ನ ವ್ಯರ್ಥವಾಗಿದ್ದು ಹೆಚ್ಚು ಬೇಸರ ಮೂಡಿಸಿದೆ: ಭಾವನಾ ರಾಮಣ್ಣ
ಸಿದ್ದರಾಮಯ್ಯಗೆ ನಿವಾಸಕ್ಕೆ ಆಗಮಿಸಿದ್ದ ಭಾವನಾ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುತ್ತಾ, ಎಲ್ಲ ನಿರಾಶೆಯನ್ನು ಬದಿಗೊತ್ತಿ ಪಕ್ಷ ನೀಡುವ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಭಾಯಿಸುವುದಾಗಿ ಹೇಳಿದರು.
ಬೆಂಗಳೂರು: ನಟಿ ಭಾವನಾ ರಾಮಣ್ಣ (Bhavana Ramanna) ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದು ನಿಮಗೆ ಗೊತ್ತಿದೆ. ಆದರೆ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar); ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಭಾವನಾಗೆ ಟಿಕೆಟ್ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಟಿಕೆಟ್ ಸಿಗದ ಬಗ್ಗೆ ನಟಿಯಲ್ಲಿ ಅಸಮಾಧಾನವಿದೆಯಾದರೂ, ರಾಜ್ಯದ ನಾಯಕರ ಪ್ರಯತ್ನಗಳ ಹೊರತಾಗಿಯೂ ಅವಕಾಶ ಸಿಗದಿರುವುದು ಹೆಚ್ಚು ಬೇಸರ ತಂದಿದೆ ಎಂದು ಹೇಳುತ್ತಾರೆ. ಪಕ್ಷ ಸೇರುವಾಗಲೇ ಟಿಕೆಟ್ ಸಿಗಲಾರದು ಎಂಬ ಸುಳಿವನ್ನು ಸಿದ್ದರಾಮಯ್ಯ ನೀಡಿದ್ದರಂತೆ. ಇಂದು ಸಿದ್ದರಾಮಯ್ಯಗೆ ನಿವಾಸಕ್ಕೆ ಆಗಮಿಸಿದ್ದ ಭಾವನಾ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುತ್ತಾ, ಎಲ್ಲ ನಿರಾಶೆಯನ್ನು ಬದಿಗೊತ್ತಿ ಪಕ್ಷ ನೀಡುವ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಭಾಯಿಸುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್ನಲ್ಲೊಂದು ಭಾವೈಕ್ಯತೆಯ ಜಾತ್ರೆ
