ಎಂದಿನಂತಿರದ ಸಿದ್ದರಾಮಯ್ಯ ವಿಧಾನಸಭೆ ಮೆಟ್ಟಿಲು ಹತ್ತುವಾಗ ಎಡವಿದರು!

ಎಂದಿನಂತಿರದ ಸಿದ್ದರಾಮಯ್ಯ ವಿಧಾನಸಭೆ ಮೆಟ್ಟಿಲು ಹತ್ತುವಾಗ ಎಡವಿದರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 10, 2022 | 1:37 PM

ಮೊದಲ ಮೆಟ್ಟಿಲು ಹತ್ತಿದ ಬಳಿಕ ಅವರು ಒಂದರೆಕ್ಷಣ ನಿಂತು ಮೇಲೆ ನೋಡಿ ಸಾವರಿಸಿಕೊಂಡು ಎರಡನೇ ಮೆಟ್ಟಿಲು ಹತ್ತಿ ಕೊನೆ ಮೆಟ್ಟಿಲು ಹತ್ತುವಾಗ ಎಡವುತ್ತಾರೆ. ಕೂಡಲೇ ಅವರ ಅಂಗರಕ್ಷಕರು ಬೀಳದಂತೆ ಹಿಡಿದುಕೊಳ್ಳುತ್ತಾರೆ.

ಬೆಂಗಳೂರು: ಈ ಮೊದಲಿನ ವಿಡಿಯೋನಲ್ಲೂ ನಾವು ಸಿದ್ದರಾಮಯ್ಯನವರು (Siddaramaiah) ರಾಜ್ಯಸಭೆಗೆ ಚುನಾವಣೆ (RS Polls) ನಡೆಯುತ್ತಿರುವ ಇಂದು (ಶುಕ್ರವಾರ) ಎಂದಿನಂತಿಲ್ಲ ಎಂದು ಹೇಳಿದ್ದೆವು. ಮನೆಯಿಂದ ಹೊರಡುವಾಗ ಅವರ ಮನಸ್ಥಿತಿ ಕೊಂಚ ಬೇರೆ ಅನಿಸಿತು. ಅಲ್ಲಿಂದ ಅವರು ವಿಧಾನ ಸಭೆಗೆ ಬಂದು ಮೆಟ್ಟಿಲು ಹತ್ತುವಾಗ ಎಡುವುತ್ತಾರೆ. ಸಿದ್ದರಾಮಯ್ಯನವರಿಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಇಂಥ ಸಂಗತಿಗಳು ಸಂಭವಿಸುವುದಿಲ್ಲ. ಮೆಟ್ಟಿಲು ಹತ್ತವಾಗಲೂ ಗಮನಿಸಿ ಮಾರಾಯ್ರೇ. ಮೊದಲ ಮೆಟ್ಟಿಲು ಹತ್ತಿದ ಬಳಿಕ ಅವರು ಒಂದರೆಕ್ಷಣ ನಿಂತು ಮೇಲೆ ನೋಡಿ ಸಾವರಿಸಿಕೊಂಡು ಎರಡನೇ ಮೆಟ್ಟಿಲು ಹತ್ತಿ ಕೊನೆ ಮೆಟ್ಟಿಲು ಹತ್ತುವಾಗ ಎಡವುತ್ತಾರೆ. ಕೂಡಲೇ ಅವರ ಅಂಗರಕ್ಷಕರು ಬೀಳದಂತೆ ಹಿಡಿದುಕೊಳ್ಳುತ್ತಾರೆ.

ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸದಂತೆ ಅವರು ಆತಂಕದಲ್ಲಿದ್ದಾರೆಯೇ?

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.