AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿಗಂದೂರು ಸೇತುವೆ’ಗೆ ಒಂದು ವರ್ಷದ ಸಂಭ್ರಮ: ವಿದ್ಯುತ್ ದೀಪಾಲಂಕಾರದ ವೈಭವ

‘ಸಿಗಂದೂರು ಸೇತುವೆ’ಗೆ ಒಂದು ವರ್ಷದ ಸಂಭ್ರಮ: ವಿದ್ಯುತ್ ದೀಪಾಲಂಕಾರದ ವೈಭವ

ಬಸವರಾಜ್​ ಯರಗಣವಿ
| Edited By: |

Updated on: Jul 15, 2026 | 1:28 PM

Share

ಸಾಗರದ ಸಿಗಂದೂರು ಸೇತುವೆಗೆ ಒಂದು ವರ್ಷ. ಶರಾವತಿ ಹಿನ್ನೀರಿನ ಮೇಲೆ ನಿರ್ಮಿಸಲಾದ ಈ ಐತಿಹಾಸಿಕ ಕೇಬಲ್ ಸೇತುವೆಯ ವಾರ್ಷಿಕೋತ್ಸವವನ್ನು ಮಲೆನಾಡಿನ ಜನತೆ ಹಬ್ಬದಂತೆ ಆಚರಿಸಿದ್ದಾರೆ. ವಿಶೇಷ ವಿದ್ಯುತ್ ದೀಪಾಲಂಕಾರದಿಂದ ಮಿಂಚಿದ ಸೇತುವೆಯ ರಾತ್ರಿಯ ಡ್ರೋನ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಈ ಸೇತುವೆ ಒಂದು ವರ್ಷ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ.

ಸಾಗರ, ಜು.15: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಸಂಪರ್ಕಿಸುವ ಹಾಗೂ ಶರಾವತಿ ಹಿನ್ನೀರಿನ ಮೇಲೆ ನಿರ್ಮಾಣಗೊಂಡಿರುವ ಐತಿಹಾಸಿಕ ಸಿಗಂದೂರು ಸೇತುವೆಯು ಸಾರ್ವಜನಿಕ ಸೇವೆಗೆ ಮುಕ್ತವಾಗಿ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ. ಈ ವಿಶೇಷ ದಿನವನ್ನು ಮಲೆನಾಡಿನ ಗಡಿಭಾಗದ ಜನತೆ ಹಬ್ಬದಂತೆ ಆಚರಿಸಿ ಸಂಭ್ರಮಿಸಿದ್ದಾರೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಉದ್ಘಾಟನೆಗೊಂಡಿದ್ದ ಈ ಸುಂದರ ಕೇಬಲ್ ಸೇತುವೆಯು, ಇದೀಗ ಮೊದಲ ವರ್ಷದ ವಾರ್ಷಿಕೋತ್ಸವದ ನೆನಪಿನಲ್ಲಿ ಮೈದುಂಬಿ ಕಂಗೊಳಿಸುತ್ತಿದೆ. ಸೇತುವೆಯ ಮೊದಲ ವರ್ಷದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಇಡೀ ಸೇತುವೆಗೆ ವಿಶೇಷವಾಗಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬಣ್ಣ ಬಣ್ಣದ ಎಲ್ಇಡಿ ದೀಪಗಳಿಂದ ಸಿಂಗಾರಗೊಂಡಿದ್ದ ಸೇತುವೆಯು ಶರಾವತಿ ನದಿಯ ಹಿನ್ನೀರಿನ ಮಧ್ಯೆ ಸ್ವರ್ಗಲೋಕದಂತೆ ಕಂಗೊಳಿಸುತ್ತಿತ್ತು.ರಾತ್ರಿಯ ಹೊತ್ತು ಕಗ್ಗತ್ತಲ ನಡುವೆ ದೀಪಾಲಂಕಾರದ ಭವ್ಯತೆಯಿಂದ ಮಿಂಚುತ್ತಿದ್ದ ಸೇತುವೆಯ ರಮಣೀಯ ದೃಶ್ಯಗಳನ್ನು ಡ್ರೋನ್ ಕ್ಯಾಮರಾ ಬಳಸಿ ಅತ್ಯಂತ ಆಕರ್ಷಕವಾಗಿ ವಿಡಿಯೋ ಮತ್ತು ಫೋಟೋಗಳ ಮೂಲಕ ಸೆರೆಹಿಡಿಯಲಾಗಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಸವರಾಜ್​ ಯರಗಣವಿ
ಬಸವರಾಜ್​ ಯರಗಣವಿ

ಬಸವರಾಜ್ ಯರಗಣವಿಯವರು ಮೂಲತಃ ಧಾರವಾಡ ಜಿಲ್ಲೆಯವರು. ಇವರು ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ವರದಿಗಾರರಾಗಿ 2008ರ ಏಪ್ರಿಲ್ ನಿಂದ ವೃತ್ತಿ ಆರಂಭಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 3 ವರ್ಷ, ನಂತರ ಹಾವೇರಿ ಜಿಲ್ಲೆಯಲ್ಲಿ 3 ವರ್ಷ ವರದಿಗಾರಿಕೆಯ ಕೆಲಸ ನಿರ್ವಹಿಸಿದ್ದಾರೆ. ಸಧ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಟಿವಿ9 ಕನ್ನಡ ಸುದ್ದಿ ವಾಹಿನಿಯ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ರಾಜಕೀಯ, ಅಪರಾಧ, ಮಹತ್ವದ ಬೆಳವಣಿಗೆ ಹಾಗೂ ಮಾನವೀಯ ಸುದ್ದಿಗಳನ್ನು ವರದಿ ಮಾಡಿರುವ ಅನುಭವವಿದೆ.

Read More